ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ರೋಸ್ ವಾಟರ್ ಮುಖ ಕಾಂತಿ ಹೆಚ್ಚಳಕ್ಕೆ ಸಹಾಯಕವಾಗಿದೆ. ಅಷ್ಟೇ ಅಲ್ಲದೆ ಮುಖದಲ್ಲಿ ಉಂಟಾಗಿರುವ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮುಖಕ್ಕೆ ನಿಯಮಿತವಾಗಿ ರೋಸ್ ವಾಟರ್ ಹಚ್ಚುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.
ಇದು ಚರ್ಮದ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಡವೆಗಳನ್ನು ತಪ್ಪಿಸಲು, ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ರೋಸ್ ವಾಟರ್ ನಲ್ಲಿ ಹತ್ತಿಯನ್ನು ಬಳಸಿ ನಿಮ್ಮ ಮುಖವನ್ನು ಒರೆಸಿಕೊಳ್ಳಬೇಕು. ರೋಸ್ ವಾಟರ್ ನಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ, ನಿಮಗೆ ಮೊಡವೆಗಳು ಬರುವುದಿಲ್ಲ.
ಚರ್ಮದ ರಂಧ್ರಗಳಲ್ಲಿ ಸಂಗ್ರಹವಾದ ಬೆವರು ಮತ್ತು ಕೊಳೆಯನ್ನು ತೆಗೆದುಹಾಕಲು ರೋಸ್ ವಾಟರ್ ಅನ್ನು ಸಹ ಬಳಸಲಾಗುತ್ತದೆ. ಇದಕ್ಕಾಗಿ ರಾತ್ರಿ ಮುಖವನ್ನು ತೊಳೆದ ನಂತರವೇ ರೋಸ್ ವಾಟರ್ ಹಚ್ಚುವುದು ಒಳ್ಳೆಯದು. ಇದು ಮುಖದ ಮೇಲೆ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ.