ಶಾಲಾ ಮಕ್ಕಳ ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಮತ್ತೊಮ್ಮೆ ರಾಷ್ಟ್ರಕವಿ ಕುವೆಂಪು ಅವರನ್ನು ಮತ್ತೊಮ್ಮೆ ಅಪಮಾನ ಮಾಡಿದ್ದಾರೆ.
ಕನ್ನಡ ಪಠ್ಯದಲ್ಲಿ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಅವರನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವ ಕವಿ ಪರಿಚಯದಲ್ಲಿ “ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು” ಎಂದು ಪರಿಚಯಿಸಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕುವೆಂಪು ಅವರನ್ನು ಈ ರೀತಿ ಅಪಮಾನ ಮಾಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
*ರೋಹಿತ್ ಚಕ್ರತೀರ್ಥನ ಪಠ್ಯಪುಸ್ತಕ ಸಮಿತಿ ಕುವೆಂಪು ಪಠ್ಯದ ಜತೆಗೆ ನೀಡಿರುವ ಪರಿಚಯವನ್ನು ಗಮನಿಸಿ. ಕುವೆಂಪು ಅವರು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರಂತೆ! ಇದು ಕುವೆಂಪು ಅವರಿಗೆ ಮಾಡಿದ ಘೋರ ಅಪಮಾನ. ಇದನ್ನು ಸಹಿಸಿಕೊಂಡಿರುವ ರಕ್ತಹೀನ ಕನ್ನಡಿಗರಿಗೆ ಧಿಕ್ಕಾರ.* pic.twitter.com/IWQbhalhns
— ಸಂಗೀತ ಶೆಟ್ಟಿ (@SangeethaKRV) May 23, 2022
ರೋಹಿತ್ ಚಕ್ರತೀರ್ಥ ಈ ಮೊದಲೇ 2017 ರಲ್ಲಿ ಕುವೆಂಪು ಅವರಿಂದ ರಚಿತವಾದ ನಾಡಗೀತೆಯನ್ನು ತಿರುಚಿ ರಾಜ್ಯವನ್ನು ಕಾಂಗ್ರೆಸ್ ಜನನಿ ತನುಜಾತೆ, ಎಣ್ಣೆ ಕುಡುಕರ ಬೀಡೇ, ಮಟನ್ ಅಂಗಡಿಗಳ ಸಾಲೇ ಎಂದು ಬರೆದು ಅಪಮಾನ ಮಾಡಿದ್ದರು. ಆ ಸಂದರ್ಭದಲ್ಲಿಯೂ ಆಕ್ರೋಶಗೊಂಡಿದ್ದ ಕನ್ನಡಾಭಿಮಾನಿಗಳು ರೋಹಿತ್ ಚಕ್ರತೀರ್ತ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಇವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದೀಗ ಇವರ ನೇತೃತ್ವದ ಸಮಿತಿ ರಾಷ್ಟ್ರಕವಿ ಕುವೆಂಪು ಅವರನ್ನು ಬೇರೊಬ್ಬರ ಸಹಾಯದಿಂದ ಪ್ರಖ್ಯಾತ ಕವಿಯಾಗಿ ಗುರುತಿಸಿಕೊಂಡವರು ಎಂಬ ಅರ್ಥದಲ್ಲಿ ಬರೆದು ಮತ್ತೊಮ್ಮೆ ಅಪಮಾನ ಮಾಡಿದೆ.
ಇನ್ನು, ಕನ್ನಡ ಪಠ್ಯಪುಸ್ತಕಗಳಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ದೇವನೂರು ಮಹಾದೇವ ಮೊದಲಾದವರ ಕವಿ ಪರಿಚಯವನ್ನು ಕೇವಲ 50 ಪದಗಳಲ್ಲಿ ಮಾಡಿದ್ದಾರೆ. ಆದರೆ, ಬ್ರಾಹ್ಮಣರಾದ ಬನ್ನಂಜೆ ಗೋವಿಂದಾಚಾರ್ಯರ ಪರಿಚಯವನ್ನು 120 ಪದಗಳಲ್ಲಿ ಮಾಡಿದ್ದಾರೆ ಎಂದು ವಿಚಾರವಾದಿ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಠ್ಯ ಪುಸ್ತಕದಲ್ಲಿ ದೇವನೂರು ಪರಿಚಯಕ್ಕೆ 50 ಪದಗಳು. ಬನ್ನಂಜೆ ಪರಿಚಯಕ್ಕೆ 120 ಕ್ಕೂ ಹೆಚ್ಚು ಪದಗಳು! ನಮ್ಮ ಆಯ್ಕೆ ದೇವನೂರು ತಾನೇ? #RejectRSSTextBooks#RejectBrahminTextBooks
— P. Bilimale (@PurushothamaBi1) May 22, 2022
ಇಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವಿಟ್ ಮಾಡಿದ್ದು, ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ರೋಹಿತ್ ಚಕ್ರತೀರ್ಥನಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು
ಗೇಲಿ ಮಾಡಿದ
ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ @BJP4Karnataka ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು. pic.twitter.com/RLGLIOhTLm— Siddaramaiah (@siddaramaiah) May 23, 2022
ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಹೇಳುವುದು ಕುವೆಂಪು ಅವರಿಗೆ ಮಾಡಿದ ಅವಮಾನ… pic.twitter.com/dSa2dgAebc
— Bhavya gouda (@bhavyag23) May 23, 2022