ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರದಂತೆ ಬಿಜೆಪಿ ಭೀಷ್ಮ ಲಾಲ್ಕೃಷ್ಣ ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಶಿ ಅವರಿಗೆ ಸೂಚಿಸಲಾಗಿದೆ.
ಈ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂದು ದೀರ್ಘಕಾಲದಿಂದ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಇಬ್ಬರು ನಾಯಕರನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಇರಿಸಲಾಗಿದೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟಿಸಲಿದ್ದಾರೆ.
ಇಬ್ಬರೂ ಕುಟುಂಬದ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ ಕಾರ್ಯಕ್ರಮಕ್ಕೆ ಬರದಂತೆ ಮನವಿ ಮಾಡಲಾಗಿದೆ. ಇಬ್ಬರೂ ನಮ್ಮ ಮನವಿಯನ್ನು ಒಪ್ಪಿಕೊಂಡಿದ್ದಾರೆ
ಎಂದು ರಾಮಮಂದಿರ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ರಾಮಮಂದಿರ ರಥಯಾತ್ರೆ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರು ರಾಮಮಂದಿರಕ್ಕೆ ಹೊಸ ರಾಜಕೀಯ ತಿರುವನ್ನೇ ನೀಡಿದ್ದರು ಮತ್ತು ಆ ರಥಯಾತ್ರೆ ಬಿಜೆಪಿ ಬಲಿಷ್ಠವಾಗಿ ರಾಜಕೀಯವಾಗಿ ಬೇರೂರಲು ಪ್ರಮುಖ ಕಾರಣವಾಯಿತು.
ನವೆಂಬರ್ನಲ್ಲಿ ಅಡ್ವಾಣಿ ಅವರಿಗೆ 96 ವರ್ಷ ಪೂರ್ಣಗೊಂಡಿದ್ದರೆ, ಮುಂದಿನ ತಿಂಗಳು ಮುರಳಿ ಮನೋಹರ್ ಜೋಶಿ ಅವರಿಗೆ 90 ವರ್ಷ ತುಂಬಲಿದೆ.
ವಿಚಿತ್ರವೆಂದರೆ 90 ವರ್ಷದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ರಾಮಮಂದಿರ ಉದ್ಘಾಟನೆಗೆ ಈಗಾಗಲೇ ರಾಮಮಂದಿರ ಸಂಕೀರ್ಣ ಅಭಿವೃದ್ಧಿ ಸಮಿತಿ ಖುದ್ದು ಆಹ್ವಾನ ನೀಡಿದ್ದು, ರಾಮಮಂದಿರ ದೇವಸ್ಥಾನ ಟ್ರಸ್ಟ್ ಕೂಡಾ ಆಹ್ವಾನ ನೀಡಲಿದೆ.
ADVERTISEMENT
ADVERTISEMENT