ರಾಜಸ್ಥಾನ ವಿಧಾನಸಭಾ ಚುನಾವಣಾ ಸಮೀಕ್ಷೆ

ವಿಧಾನಸಭಾ ಚುನಾವಣೆಗಳ ಬಗ್ಗೆ ನಿಖರ ಅಂದಾಜು ಮಾಡುವ Small Box India ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತನ್ನ ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು ಸರ್ಕಾರ ರಚನೆಗೆ 101 ಶಾಸಕರ ಬಹುಮತ ಅಗತ್ಯ.
2018ರ ಡಿಸೆಂಬರ್​ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 100 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 73 ಸೀಟುಗಳನ್ನು ಗೆದ್ದಿತ್ತು.
ಸ್ವತಂತ್ರ ಅಭ್ಯರ್ಥಿಗಳು 13, ಬಹುಜನಸಮಾಜ ಪಕ್ಷ 6, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 3, ಸಿಪಿಐಎಂ 2, ಭಾರತೀಯ ಬುಡಕಟ್ಟು ಪಕ್ಷ (BTP) 2, ರಾಷ್ಟ್ರೀಯ ಲೋಕದಳ  1 ಸೀಟನ್ನು ಗೆದ್ದುಕೊಂಡಿತ್ತು.

2018ರ ಫಲಿತಾಂಶ:

ಪಕ್ಷ ಸೀಟು
ಕಾಂಗ್ರೆಸ್​ 100
ಬಿಜೆಪಿ 73
ಸ್ವತಂತ್ರರು 13
ಬಹುಜನ ಸಮಾಜ ಪಕ್ಷ 6
ಭಾರತೀಯ ಬುಡಕಟ್ಟು ಪಕ್ಷ 2
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 3
ಭಾರತೀಯ ಕಮ್ಯೂನಿಸ್ಟ್​ ಪಕ್ಷ (ಎಂ) 2
ರಾಷ್ಟ್ರೀಯ ಲೋಕದಳ 1
ಒಟ್ಟು ಸೀಟುಗಳು 200
ಸರಳ ಬಹುಮತಕ್ಕೆ 101
ಈ ಬಾರಿ ಹೇಗಿದೆ ಚುನಾವಣಾ ಸನ್ನಿವೇಶ..?
Small Box India ಸಮೀಕ್ಷೆಯ ಪ್ರಕಾರ 45 ಕಾಂಗ್ರೆಸ್​ ಶಾಸಕರು ಮತ್ತು 39 ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ.
ಸಮೀಕ್ಷೆಯ ಪ್ರಕಾರ ಕಾಂಗ್ರೆಸ್​ 78 ರಿಂದ 84 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ 100-106 ಸ್ಥಾನಗಳನ್ನು ಗೆಲ್ಲಬಹುದು. ಇತರರು 8ರಿಂದ 10 ಸೀಟುಗಳನ್ನು ಗೆಲ್ಲಬಹುದು ಎಂದು Small Box India ಅಂದಾಜಿಸಿದೆ.
ಈ ಸಮೀಕ್ಷೆಯ ಪ್ರಕಾರ ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್​​ಗೆ ಸೋಲಾಗಲಿದ್ದು, ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.

Small Box India ಅಂದಾಜು:

ಪಕ್ಷ ಸೀಟು
ಕಾಂಗ್ರೆಸ್​ 78-84
ಬಿಜೆಪಿ 100-106
ಇತರರು 08–10
ಒಟ್ಟು ಸೀಟುಗಳು 200
ಸರಳ ಬಹುಮತಕ್ಕೆ 101