ಸ್ಕೂಟಿ ಮೇಲೆ ಬಿದ್ದ ಮರ – ಮನೆಗೆ ಹೋಗುವಾಗ ಸವಾರ ಸಾವು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಬೈಕ್​ ಸವಾರ ಸಾವನ್ನಪ್ಪಿದ್ದಾರೆ.

ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳದಲ್ಲಿ ಬೈಕ್​ ಸವಾರ ವೇಣುಗೋಪಾಲ್​ ಅವರ ಸ್ಕೂಟಿ ಮೇಲೆ ಮರ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

45 ವರ್ಷದ ವೇಣುಗೋಪಾಲ್​ ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿದ್ದರು. ಮನೆಗೆ ವಾಪಸ್​ ಆಗುವಾಗ ಹೋಂ ಸ್ಟೇ ಪಕ್ಕದಲ್ಲೇ ದುರಂತ ಸಂಭವಿಸಿದೆ.