ರಾಯಚೂರು (Raichur) ನಗರದಲ್ಲಿ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ನಾಲ್ವರು ಯುವತಿಯರು ಕಾಣೆಯಾದ (college Girls Missing) ಪ್ರಕರಣ ತಡವಾಗಿ ವರದಿಯಾಗಿದೆ.
ನಗರದ ರೈಲ್ವೇ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದಾರೆ (College Girls Missing). ಆತಂಕಗೊಂಡಿರುವ ಪಾಲಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಕ್ತಿನಗರದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ರಾಯಚೂರು (Raichur) ನಗರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ವರ್ಷವಷ್ಟೇ ಕಾಲೇಜು ಮೆಟ್ಟಲು ಹತ್ತಿದ್ದ ಯುವತಿಯರು ನಾಪತ್ತೆಯಾಗಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಥಮ ಪಿಯುಸಿ ಓದುತ್ತಿದ್ದ ನಾಲ್ವರೂ ಯುವತಿಯರು ಗೆಳತಿಯರು ಆಗಿದ್ದರು ಎಂದು ತಿಳಿದು ಬಂದಿದೆ.
ನಾಪತ್ತೆಯಾದವರಲ್ಲಿ (College Girls Missing) ಮೂವರು ಅಪ್ರಾಪ್ತರು. ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸಾಗಿಲ್ಲ. ಯಾರೋ ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಪಾಲಕರೊಬ್ಬರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆ ಮತ್ತು ಕಾಲೇಜು ಇರುವ ವ್ಯಾಪ್ತಿಯ ಸದರ್ ಬಜಾರ್ ಠಾಣೆಯ ಪೊಲೀಸರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಆರಂಭವಾಗಿದ್ದು, ಇದುವರೆಗೂ ಸಣ್ಣ ಸುಳಿವು ಪತ್ತೆಯಾಗಿಲ್ಲ.