ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಈ ವರ್ಷದ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದು. ಈ ಮೊದಲು ಜನವರಿ 14ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು.
ಪ್ರಭಾಸ್ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿರುವ ಸಂದರ್ಭದಲ್ಲಿ ಚಿತ್ರ ತಯಾರಕರಿಂದ ಸಿಹಿ ಸುದ್ಧಿಯೊಂದು ಬಂದಿದೆ. ಚಿತ್ರದ ನಿರ್ಮಾಪಕರು ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರ ಮಧುರವಾದ ಪ್ರೇಮಕಥೆಯು ಮಾರ್ಚ್ 11, 2022 ರಂದು ಥಿಯೇಟರ್ಗಳಿಗೆ ಬರಲಿದೆ. ಪ್ರಭಾಸ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, 11.03.22. ರಂದು ನಾನು ನಿಮ್ಮನ್ನು ನೋಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
Come fall in love from March 11th, 2022.
Witness the biggest war between love & destiny 💕#RadheShyamOnMarch11#RadheShyam #Prabhas @hegdepooja @director_radhaa @UV_Creations @TSeries @GopiKrishnaMvs @AAFilmsIndia @radheshyamfilm pic.twitter.com/uqtoLjJRKF
— Prabhas FC (@PrabhasRaju) February 2, 2022
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಕುತೂಹಲ ಸೃಷ್ಟಿಸಿದೆ. ನಿಗೂಢ ಮತ್ತು ಎಲ್ಲವನ್ನೂ ತಿಳಿದಿರುವ ಆದರೆ ಏನನ್ನೂ ಬಹಿರಂಗಪಡಿಸದ ವ್ಯಕ್ತಿ ಎಂದು ಹೇಳಿಕೊಳ್ಳುವ ಲವರ್ ಬಾಯ್ ‘ಹಸ್ತಸಾಮುದ್ರಿಕ ಶಾಸ್ತ್ರದ ಐನ್ಸ್ಟೈನ್’ ‘ವಿಕ್ರಮ್ ಆದಿತ್ಯ’ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಅವರ ಪ್ರೇಮಕಥೆಯ ಜೊತೆಗೆ, ವಿನಾಶದ ಒಂದು ನೋಟವನ್ನು ಸಹ ಹಂಚಿಕೊಳ್ಳುತ್ತದೆ. ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ. ಚಿತ್ರವನ್ನು ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ.