ಕತಾರ್ನಲ್ಲಿ ಭಾರತದ ನೌಕಾ ಸೇನೆಯ 8 ಮಂದಿ ಮಾಜಿ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಲಾಗಿದೆ. ಈ ಮೂಲಕ ರಾಜತಾಂತ್ರಿಕ ಪ್ರಯತ್ನದಲ್ಲಿ ದೊಡ್ಡ ಗೆಲುವು ಸಿಕ್ಕಿದೆ.
ಕತಾರ್ ವಿರುದ್ಧ ಬೇಹುಗಾರಿಕೆ ಮಾಡಿದ್ದ ಆರೋಪದಲ್ಲಿ ಮರಣದಂಡನೆ ಒಳಗಾಗಿದ್ದ ಮಾಜಿ ಸೇನಾಧಿಕಾರಿಗಳಿಗೆ ಈಗ ಜೈಲು ಶಿಕ್ಷೆ ವಿಧಿಸಲಾಗಿದೆ. ಕತಾರ್ನ ಮೇಲ್ಮನವಿ ನ್ಯಾಯಾಲಯ ಮರಣದಂಡನೆಯನ್ನು ಜೈಲು ಶಿಕ್ಷೆ ವಿಧಿಸಲಾಗಿದೆ.
ಕತಾರ್ ವಿರುದ್ಧದ ಬೇಹುಗಾರಿಕೆ ಆರೋಪದಡಿಯಲ್ಲಿ ಮಾಜಿ ನೌಕಾ ಸೇನಾಧಿಕಾರಿಗಳಾಗಿರುವ ಪೂರ್ಣೆಂದು ತಿವಾರಿ, ಸುಗುಣಾಕರ್ ಪಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ, ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ, ಸೌರಭ ವಶಿಷ್ಢ, ರಾಜೇಶ್ ಗೋಪಕುಮಾರ್ ಮರಣದಂಡನೆಗೆ ಒಳಗಾಗಿದ್ದರು.