PSI ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗಾರಗಿ ಬಂಧನ ಈವರೆಗೂ ಆಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಲವು ಪ್ರಶ್ನೆ ಕೇಳಿದೆ.
* ಅಕ್ರಮ ಬೆಳಕಿಗೆ ಬಂದ ಹಲವು ದಿನಗಳವರೆಗೂ PSI ಪರೀಕ್ಷೆ ಅಕ್ರಮದ ಪ್ರಕರಣ ದಾಖಲಿಸಿರಲಿಲ್ಲ ಏಕೆ?
* ಪ್ರಕರಣ ದಾಖಲಾಗಿ ಹಲವು ದಿನಗಳಾದರೂ ಪ್ರಮುಖ ಆರೋಪಿ ದಿವ್ಯ ಹಾಗರಗಿ ಬಂಧನವಿಲ್ಲ ಏಕೆ?
* ದಿವ್ಯ ಮನೆಯಲ್ಲಿ ತಿಂದ ಒಂದು ಪ್ಲೇಟ್ ಕೇಸರಿ ಬಾತ್ಗೆ ಇಷ್ಟೊಂದು ನಿಯತ್ತೆ ಗೃಹಸಚಿವರೇ?
* PSI ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿಗೂ ಬಿಜೆಪಿಗೂ ಸಂಬಂಧವೇ ಇಲ್ಲವಾ?
* ದಿವ್ಯ ಹಾಗರಗಿ ಬಿಜೆಪಿಯ ಪದಾಧಿಕಾರಿ ಎಂಬುದು ಸುಳ್ಳೇ?
* ಗೃಹಸಚಿವರೊಂದಿಗೆ ಆಪ್ತ ಒಡನಾಟ ಹೊಂದಿರುವುದು ಸುಳ್ಳೇ?
* ಬಿಜೆಪಿಗೂ ಆಕೆಗೂ ಸಂಬಂಧವಿಲ್ಲವೆಂದರೆ ಸಚಿವರುಗಳೊಂದಿಗೆ, ಮಾಜಿ ಸಿಎಂನೊಂದಿಗೆ, ಗೃಹಸಚಿವರೊಂದಿಗೆ ಆಕೆಗಿರುವ ಸಂಬಂಧವೇನು?
ಉತ್ತರಿಸಿ ಎಂದು ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಸವಾಲು ಹಾಕಿದೆ.