ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿದಿನ ಏನೆಲ್ಲ ಕೆಲಸ ಮಾಡ್ತಾರೆ ಎನ್ನುವುದರ ಬಗ್ಗೆ ಪಟ್ಟಿ ಹಂಚಿಕೊಂಡು ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ. ಪ್ರಧಾನಿಗಳು ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸುವುದು , ಸರ್ಕಾರಿ ಕಂಪೆನಿಗಳನ್ನು ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಪ್ರಧಾನ ಮಂತ್ರಿಗಳು ದೈನಂದಿನ ಮಾಡಬೇಕಾದ ಪಟ್ಟಿ.
1. ಪೆಟ್ರೋಲ್-ಡೀಸೆಲ್-ಗ್ಯಾಸ್ ದರವನ್ನು ನಾನು ಎಷ್ಟು ಹೆಚ್ಚಿಸಬೇಕು.
2. ಜನರ ‘ಖರ್ಚಿನ ಚರ್ಚೆ’ ನಿಲ್ಲಿಸುವುದು ಹೇಗೆ.
3. ಯುವಕರಿಗೆ ಉದ್ಯೋಗದ ಖಾಲಿ ಕನಸುಗಳನ್ನು ಹೇಗೆ ತೋರಿಸುವುದು.
4. ನಾನು ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?
5. ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ ಎನ್ನುವುದನ್ನು ಪ್ರಧಾನಿಗಳು ಪ್ರತಿದಿನ ಯೋಚಿಸುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.