ಮಂಡ್ಯಕ್ಕೆ ಮೋದಿ ಭೇಟಿ ಹಿನ್ನೆಲೆ: ಪಾಲಿಕೆ ಹಿಡಿದಿದ್ದ ಬೀದಿನಾಯಿ ಉಸಿರುಗಟ್ಟಿ ಸಾವು

ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಂಡ್ಯ ಹೆದ್ದಾರಿ ಬಳಿ ಅನೇಕ ಬೀದಿನಾಯಿಗಳನ್ನು ಹಿಡಿದಿತ್ತು.

ಆದರೆ ಈ ಬೀದಿನಾಯಿಗಳಲ್ಲಿ ಪೈಕಿ ಒಂದು ಬೀದಿನಾಯಿ ಉಸಿರುಗಟ್ಟಿ ಸತ್ತು ಹೋಗಿದೆ.

ಈ ಬಗ್ಗೆ ಮೈಸೂರು ನಿವಾಸಿ ಸುಪ್ರೀತ್​ ನಾರಾಯಣ್​ ಸುರೇಶ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.

ಇವರ ಫೇಸ್​ಬುಕ್​ ಪೋಸ್ಟ್​ನ್ನು ನಟಿ ಐಂದ್ರಿತಾ ರೇ ಮತ್ತು ಸಿನಿಮಾ ನಿರ್ದೇಶಕ ಕೆ ಎಂ ಚೈತನ್ಯ ಅವರು ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಮಂಡ್ಯ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ ಅಂತ  ನೆರೆಯ ಮೈಸೂರು ನಗರ ಪಾಲಿಕೆ ಮಂಡ್ಯದಲ್ಲಿನ ಹೆದ್ದಾರಿ ಸಮೀಪದಲ್ಲಿನ ಅನೇಕ ಬೀದಿ ನಾಯಿಗಳನ್ನು 🐕🐶 ಹಿಡಿದರು.

ಅದನ್ನು ಎಲ್ಲಿಡಬೇಕು ಎನ್ನುವ ಆದೇಶ ಸಂಜೆಯವರೆಗೂ ಅಧಿಕಾರಿ ನೀಡಲಿಲ್ಲ. ಅದನ್ನು ಸುಮಾರು 6 ಘಂಟೆಯ ಕಾಲ ಬಲೆಯಲ್ಲೆ ಹಿಡಿದಿಟ್ಟ ಕಾರಣ. ಒಂದು 7 ವರ್ಷದ ನಾಯಿ ಉಸಿರುಗಟ್ಟಿ ಸತ್ತಿದೆ, ಇದಕ್ಕೆ ನೇರವಾಗಿ  ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಹಾಗೂ ಆಯುಕ್ತರೇ ಕಾರಣ, ಕಾಣದ ಕೈ ಆದೇಶ ನೀಡಿದೆ.

ಅಲ್ಲೇ ಹುಟ್ಟಿ ಅಲ್ಲೇ ಬೆಳೆದ 7 ವರ್ಷದ ಬೀದಿ ನಾಯಿಗೆ , 5 ನಿಮಿಷದ Road Show ಸಾವಾಗಿ ಪರಿಣಮಿಸಿತು.

ಪ್ರತಿ ಬಾರಿ ಯಾವುದೇ ಪಕ್ಷದ ಒಬ್ಬ ಮಂತ್ರಿ ಬಂದರೆ ಅಲ್ಲಿನ ಸುತ್ತ ಮುತ್ತಲಿನ ನಾಯಿಗಳನ್ನು ಹೀಗೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು,, ಇದಕ್ಕೆ ಒಂದು ಅಭಿಯಾನ ಮಾಡಬೇಕು, ಎಲ್ಲರೂ ಸಹಕರಿಸಿ

ಎಂದು ಸುಪ್ರೀತ್​ ನಾರಾಯಣ್​ ಸುರೇಶ್​ ಅವರು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here