ದೇಶದ ಮೊದಲ ಪ್ರಜೆ ರಾಷ್ಟçಪತಿ ಹುದ್ದೆಗೆ ಚುನಾವಣೆ ಘೋಷಣೆ ಆಗಿದೆ. ಜುಲೈ 24ರಂದು ಈಗಿನ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯಲಿದೆ.
ಚುನಾವಣೆಗೆ ಅಧಿಸೂಚನೆ ಪ್ರಕಟ: ಜೂನ್ 15
ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಜೂನ್ 30
ಜುಲೈ 18ರಂದು ರಾಷ್ಟçಪತಿ ಹುದ್ದೆಗೆ ಮತದಾನ ನಡೆಯಲಿದೆ
ರಾಷ್ಟçಪತಿ ಚುನಾವಣೆ ಫಲಿತಾಂಶ ಜುಲೈ 21ರಂದು ಪ್ರಕಟವಾಗಲಿದೆ.
ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳ ಶಾಸಕರು ಮತದ ಹಕ್ಕು ಹೊಂದಿರುತ್ತಾರೆ.
ರಾಷ್ಟçಪತಿ ಆಯ್ಕೆಯಲ್ಲಿ ಮತದಾನ ಮಾಡಲಿರುವ ರಾಜ್ಯಸಭೆ ಮತ್ತು ಲೋಕಸಭಾ ಸಂಸದರ ಸಂಖ್ಯೆ : 776. ಶಾಸಕರ ಸಂಖ್ಯೆ: 4,033
ಸಂಸದರ ಮತಗಳ ಒಟ್ಟು ಮೌಲ್ಯ: 5,43,200. ಶಾಸಕರ ಮತಗಳ ಮೌಲ್ಯ: 5,43,231. ಒಟ್ಟು ಮತಗಳು: 10.86,431. ಒಬ್ಬ ಸಂಸದ ಮತ ಮೌಲ್ಯ = 700
ರಾಷ್ಟçಪತಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪರ 50 ಮಂದಿ ಮತದಾರರು (ಸಂಸದರು ಅಥವಾ ಶಾಸಕರು) ಮೊದಲ ಪ್ರಸ್ತಾಪಕರಾಗಿರಬೇಕು ಮತ್ತು 50 ಮಂದಿ ಎರಡನೇ ಪ್ರಸ್ತಾಪಕರಾಗಿರಬೇಕು.
ರಾಷ್ಟçಪತಿ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯಲಿದೆ. ಮತದಾರರು ತಮ್ಮ ಮತಪತ್ರವನ್ನು ಪ್ರದರ್ಶನ ಮಾಡಬೇಕಿಲ್ಲ.
ರಾಜ್ಯಸಭೆಯ ಕಾರ್ಯದರ್ಶಿ ರಾಷ್ಟçಪತಿ ಚುನಾವಣೆಯ ಚುನಾವಣಾಧಿಕಾರಿ ಆಗಿರುತ್ತಾರೆ.
ಪಕ್ಷಗಳು ರಾಷ್ಟçಪತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಶಾಸಕರು ಅಥವಾ ಸಂಸದರಿಗೆ ಇಂಥವರಿಗೆ ಮತ ಹಾಕುವಂತೆ ವಿಪ್ ಜಾರಿ ಮಾಡುವಂತಿಲ್ಲ.
ನವದೆಹಲಿಯಲ್ಲಿ ಮತ ಎಣಿಕೆ ನಡೆಯಲಿದೆ.