ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ. ಆಕೆಗೆ 32 ವರ್ಷ ವಯಸ್ಸಾಗಿತ್ತು.
ಪೂನಂ ಪಾಂಡೆ ಸಾವಿನ ಬಗ್ಗೆ ಆಕೆಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಕನ್ನಡದ ಲವ್ ಈಸ್ ಪಾಯಿಸನ್ ಸಿನಿಮಾದಲ್ಲಿ ಈಕೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಳು.
ನಶಾ ಮತ್ತು ಜರ್ನಿ ಆಫ್ ಕರ್ಮ ಹೆಸರಿನ ಹಿಂದಿ ಸಿನಿಮಾದಲ್ಲೂ ನಟಿಸಿದ್ದಳು.
ತನ್ನ ಮಾದಕ ಭಂಗಿಗಳ ಮೂಲಕ ಈಕೆ ಒಂದು ಕಾಲಕ್ಕೆ ಪಡ್ಡೆ ಹುಡುಗರ ಹೃದಯದಲ್ಲಿ ಬಿರುಗಾಳಿ ಎಬ್ಬಿಸಿದ್ದಳು.
2011ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದರೆ ತಾನು ಬೆತ್ತಲಾಗುವುದಾಗಿ ಹೇಳಿದ್ದಳು. ಭಾರತ ವಿಶ್ವಕಪ್ ಗೆದ್ದರೂ ಆಕೆ ತನ್ನ ಅಭಿಮಾನಿಗಳಿಗೆ ಕೊಟ್ಟ ಆ ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಕಾರಣ ಆಕೆಯ ಭರವಸೆ ಈಡೇರಿಕೆಗೆ ಬಿಸಿಸಿಐ ಒಪ್ಪಲಿಲ್ಲ.
2020ರಲ್ಲಿ ಈಕೆ ತನ್ನ ಗೆಳಯ ಸ್ಯಾಮ್ ಬಾಂಬೆ ಜೊತೆಗೆ ಮದುವೆ ಆಗಿದ್ದ ಫೋಟೋ ಹಂಚಿಕೊಂಡಿದ್ದಳು. ಆದರೆ ಆದಾದ ಬಳಿಕ ತಿಂಗಳಲ್ಲೇ ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ದೂರು ದಾಖಲಿಸಿದ್ದಳು.