ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಜೂನ್ 3ರಂದು ಮತದಾನ ನಡೆಯಲಿದ್ದು ಅವತ್ತೇ ಫಲಿತಾಂಶ ಪ್ರಕಟ ಆಗಲಿದೆ.
ಬಿಜೆಪಿ ಪಕ್ಷದ ಲಕ್ಷ್ಮಣ್ ಸವದಿ, ಲಹರ್ ಸಿಂಗ್ ಸಿರೋಯ, ಕಾಂಗ್ರೆಸ್ನ ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಆರ್ ಬಿ ತಿಮ್ಮಾಪೂರ್ ಮತ್ತು ಜೆಡಿಎಸ್ ಪಕ್ಷದ ಕೆ ವಿ ನಾರಾಯಣಸ್ವಾಮಿ ಮತ್ತು ಹೆಚ್ ಎಂ ರಮೇಶ್ ಗೌಡ ಅವರ ಸದಸ್ಯತ ಅವಧಿ ಜೂನ್ 14ರಂದು ಕೊನೆಗೊಳ್ಳುವ ಕಾರಣ ಖಾಲಿ ಆಗಲಿರುವ ಆ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ವಿಧಾನಸಭೆ ಸದಸ್ಯರಾಗಿರುವ ಶಾಸಕರೇ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡಲಿರುವ ಕಾರಣ ಬಿಜೆಪಿಗೆ ಮೇಲುಗೈ ಆಗುವುದು ನಿಶ್ಚಿತ.
ಮೇ 17ರಂದು ಅಧಿಸೂಚನೆ ಪ್ರಕಟ ಆಗಲಿದ್ದು, ಮೇ 24ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ.