ADVERTISEMENT
ನಿಮ್ಮ ದೇಹದ ತೂಕ ಇಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಜನತಾ ದಳ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಆರೋಗ್ಯದ ಸಲಹೆ ನೀಡಿದ್ದಾರೆ.
ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಸಿಎಂ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿಯಾದವ್ ಕೂಡಾ ಇದ್ದರು.
ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಮೋದಿಯವರು ದೇಹದ ತೂಕ ಇಳಿಸಿಕೊಳ್ಳಿ ಎಂದು ಆರೋಗ್ಯ ಸಲಹೆ ನೀಡಿದ್ದಾರೆ.
ನಿತ್ಯ ಯೋಗ ಸೇರಿದಂತೆ ಆರೋಗ್ಯ ನಿಯಮಗಳನ್ನು ಪಾಲಿಸುವ 71 ವರ್ಷದ ಮೋದಿಯವರು 32 ವರ್ಷದ ತೇಜಸ್ವಿಗೆ ಆರೋಗ್ಯ ಸಲಹೆ ನೀಡಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದ ಬಗ್ಗೆಯೂ ತೇಜಸ್ವಿ ಬಳಿ ಪ್ರಧಾನಿ ಮೋದಿಯವರು ವಿಚಾರಿಸಿದ್ದಾರೆ.
ADVERTISEMENT