ಗುಜರಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ 2021ನೇ ಸಾಲಿನಲ್ಲಿ ಮೋದಿ ಸರ್ಕಾರ 1,163 ಕೋಟಿ ರೂಪಾಯಿ ಸಂಪಾದಿಸಿದೆ.
ಇನ್ನು ಈ ಸಾಲಿನ ಅಕ್ಟೋಬರ್ ನಲ್ಲಿ ನಡೆದ ಅಭಿಯಾನದ ವೇಳೆ ಕೇಂದ್ರ ಸರ್ಕಾರದ ಅಧೀನದ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿದ್ದ ಸುಮಾರು 96 ಲಕ್ಷಕ್ಕೂ ಅಧಿಕ ಕಡತಗಳನ್ನು ಗುಜರಿಗೆ ಹಾಕಲಾಯ್ತು. ಇದರಿಂದಾಗಿ 355 ಲಕ್ಷ ಚದರ ಅಡಿ ಜಾಗ ತೆರವಾಗಿದೆ. ಜೊತೆಗೆ ಬರೋಬ್ಬರಿ 557 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ.
ಇನ್ನು ಈ ಅಭಿಯಾನದಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಈ ಹಳೆಯ ಅನುಪಯುಕ್ತ ಕಡತಗಳು ಆಕ್ರಮಿಸಿಕೊಂಡಿದ್ದ ಜಾಗಗಳನ್ನು ಸಿಬ್ಬಂದಿಗೆ ಅನುವಾಗುವ ರೀತಿಯಲ್ಲಿ ವಿನ್ಯಾಸಗೊಂಡಿವೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ ನಡೆಸಿದ ಈ ಯಶಸ್ವಿ ಅಭಿಯಾನದಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳು ಸಂಪೂರ್ಣವಾಗಿ ನಿರುಪಯುಕ್ತ ವಸ್ತುಗಳಿಂದ ಮುಕ್ತವಾಗಿವೆ. ಅಲ್ಲದೆ ಇದರಿಂದ 1,163 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ.
ದೇಶದ ಮಹತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್ ಗೆ ಖರ್ಚಾದ ವೆಚ್ಚಕ್ಕಿಂತಲೂ ಎರಡು ಪಟ್ಟು ಆದಾಯವು ಕೇವಲ ಗುಜರಿ ವಸ್ತುಗಳಿಂದಾಗಿ ಗಳಿಸಿದಂತಾಗಿದೆ.
ಈ ಸಾಲಿನ ವಿಲೇವಾರಿ ಅಭಿಯಾನದಲ್ಲಿ ಮೇಲ್ಘಾವಣಿ ಗುಜರಿ ವಸ್ತುಗಳಿಂದಲೇ 556 ಕೋಟಿ ಆದಾಯ ಬಂದಿದ್ದು, ಈ ಪೈಕಿ ರೈಲ್ವೇ ಕಚೇರಿಗಳಿಂದಲೇ 225 ಕೋಟಿ ಆದಾಯ ಗಳಿಸಲಾಗಿದೆ.
ರಕ್ಷಣಾ ಸಚಿವಾಲಯದಿಂದ 168 ಕೋಟಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಿಂದ 56 ಕೋಟಿ, ಕಲ್ಲಿದ್ದಲು ಇಲಾಖೆಯಿಂದ 34 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಇನ್ನು ಇ-ಕಡತ ಅಳವಡಿಕೆ ಶೇ.96ರಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಸ್ವಚ್ಛತಾ ಅಭಿಯಾನದಡಿ ದೇಶದ ಒಟ್ಟು 2,58,673 ಕೇಂದ್ರ ಸರ್ಕಾರಿ ಕಚೇರಿಗಳು ಗುಜರಿ ಮುಕ್ತವಾಗಿದೆ.
ಇನ್ನು ಸರ್ಕಾರಿ ಕಚೇರಿಗಳನ್ನು ಆಗ್ಗಿಂದಾಗೆ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ವಾರಕ್ಕೆ ಮೂರು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಗಳಿಗೆ ಮೀಸಲಿಡಬೇಕೆಂಬ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಲಿದೆ.