ವೆರೈಟಿ ಟ್ರೀಟ್ಮೆಂಟ್: ಆ 2 ಹಂದಿಗಳ ಜೊತೆ ವಾಕಿಂಗ್ ಮಾಡಿದರೆ ಆನಂದ, ಆರೋಗ್ಯ..!

ಹಂದಿ ಎಂದ ಕೂಡಲೇ ಅದನ್ನು ಬೈಯ್ಗುಳ ಎಮದು ಭಾವಿಸುತ್ತೇವೆ. ಕೆಲವರು ಹಂದಿ ವಿರೂಪ, ಆಕಾರ ಕಂಡು ಅಸಹ್ಯಿಸಿಕೊಳ್ಳುತ್ತಾರೆ. ಕೆಲವರು ಹಂದಿಯನ್ನು ದೇವರ ಅವತಾರ ಎಂದು ಭಾವಿಸಿ ಗೌರವಿಸುತ್ತಾರೆ. ಆದರೆ, ಬ್ರಿಟನ್​ನ ಜೂಲಿಯಾ ಬ್ಲೇಜರ್ ಮಾತ್ರ ಹಂದಿಗಳನ್ನು ಡಾಕ್ಟರ್ ಎಂದು ಪರಿಗಣಿಸುತ್ತಾರೆ.

 ಜೂಲಿ ಬ್ಲೇಜರ್ ಅವರ ಸಾಕು ಹಂದಿಗಳಾದ ಹೆಜೆಲ್ ಮತ್ತು ಹೋಲಿ, ಆಕೆಯ ಅಧೀನದಲ್ಲಿರುವ ವೈದ್ಯರಾಗಿದ್ದಾರೆ. ಅಷ್ಟೇ ಅಲ್ಲ, 2015ರಲ್ಲಿ ಗುಡ್ ಡೇ ಔಟ್​ ಹೆಸರಿನಲ್ಲಿ ಬ್ರಿಕಾನ್ಸ್ ನ್ಯಾಷನಲ್ ಪಾರ್ಕ್​ನಲ್ಲಿ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಇಲ್ಲಿಯೇ ಡಾಕರ್ ಹಂದಿಗಳಾದ ಹೆಜೆಲ್ ಮತ್ತು ಹೋಲಿ ವರಾಹಗಳು ಮನುಷ್ಯರಿಗೆ ಚಿಕಿತ್ಸೆ ನೀಡುತ್ತಿವೆ.

ಇದು ಸತ್ಯ. ಜೂಲಿಯಾಗೆ ಹಿಂದೊಮ್ಮೆ ಉಸಿರಾಡದಷ್ಟು ಒತ್ತಡವಿರುತ್ತಿತ್ತು.. ಈ ಒತ್ತಡದಿಂದ ಪಾರಾಗಲು ಈ ಎರಡು ಹಂದಿಗಳೇ ನೆರವಾದವಂತೆ. ತಾವು ಕಳೆದುಕೊಂಡಿದ್ದ ನೆಮ್ಮದಿಯನ್ನು ಹಂದಿಗಳೇ ಮರಳಿ ತಂದುಕೊಟ್ಟವು. ದಿನವೂ ಈ ಹಂದಿಗಳ ಜೊತೆ ವಾಕಿಂಗ್ ಮಾಡಿದಲ್ಲಿ ಮನಸ್ಸಿಗೆ ಏನೋ ನೆಮ್ಮದಿ ಮೂಡುತ್ತಿತ್ತು ಎಂದು ಜೂಲಿಯಾ ಹೇಳಿಕೊಳ್ಳುತ್ತಾರೆ.

ತಾವು ಹಂದಿಗಳಿಂದ ಹೊಂದಿದ ಮಾನಸಿಕ ಪ್ರಯೋಜವನ್ನು ಗುರುತಿಸಿದ ಜೂಲಿಯಾ, ತನ್ನಂತೆಯೇ ಒತ್ತಡ ಎದುರಿಸುತ್ತಿರುವವರಿಗೆ ನೆರವಾಗಲು ಪಿಗ್ ವಾಕಿಂಗ್ ತೆರಪಿ(Pig Walking Therapy) ಶುರು ಮಾಡಲು ನಿರ್ಧರಿಸಿದರು. ಅದನ್ನು ಜಾರಿಗೆ ತಂದರು. ಈಗ ಇದರಿಂದ ಅದೆಷ್ಟೋ ಮಂದಿ ನೆಮ್ಮದಿ, ಆರೋಗ್ಯ ಕಂಡಿದ್ದಾರೆ.

ಬರೀ ಹಂದಿಗಳಷ್ಟೇ ಅಲ್ಲ, ಈಗ ಕತ್ತೆ, ಕುದುರೆಗಳು ಟ್ರೀಟ್ಮೆಂಟ್ ಕೊಡುತ್ತಿವೆ. ಒಂದೊಂದು ರೀತಿಯ ಚಿಕಿತ್ಸೆ, ತೆರಪಿಗಳಿಗೆ ಒಂದೊಂದು ದರವಿದೆ. ಒಂದು ಗಂಟೆಗೆ ನಾಲ್ಕು ಸಾವಿರದಿಂದ 14 ಸಾವಿರ ರೂಪಾಯಿವರೆಗೂ ಚಾರ್ಜ್ ಮಾಡುತ್ತಾರೆ ಜೂಲಿಯಾ.

 ಅಂದ ಹಾಗೆ, ನಿಮಗೆ ಚಿಕಿತ್ಸೆ ಬೇಕಾ..? ಮುಂದಿನ ಆರು ತಿಂಗಳು ಕಾಯಲೇಬೇಕು. ಕಾರಣ ಅಕ್ಟೋಬರ್ ತಿಂಗಳವರೆಗೂ ಎಲ್ಲಾ ಸ್ಲಾಟ್​ ಗಳು ಬುಕ್ ಆಗಿವೆ. ಒಟ್ಟಿನಲ್ಲಿ ಹಂದಿ ಕಾಯೋದು ಕೂಡ ಆರೋಗ್ಯಕ್ಕೆ ಹಿತಕರ ಎಂದಾಯ್ತು