No Result
View All Result
ಸಂಸತ್ ಭವನದ (Parliament Security Breach) ಮೇಲಾದ ದಾಳಿಗೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ಗುರುಗ್ರಾಮದಲ್ಲಿ ಅಡಗಿಕೊಂಡಿದ್ದ ಆರೋಪಿ ವಿಶಾಲ್ ಶರ್ಮಾ(Vishal Sharma) ನನ್ನು ಬಂಧಿಸಲಾಗಿದೆ.
ಈ ಉಳಿದ ನಾಲ್ವರು ಆರೋಪಿಗಳಿಗೆ ಆಶ್ರಯ ಕೊಟ್ಟ ಆರೋಪವಿದೆ. ದಾಳಿಯ ಆರನೇ ಆರೋಪಿ ಲಲಿತ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಉತ್ತರಪ್ರದೇಶದ ಉನೌವ್ ಮೂಲದ ಸಾಗರ್ ಶರ್ಮಾ (Sagar Sharma), ಕರ್ನಾಟಕದ ಮೈಸೂರಿನ ವಿಜಯನಗರ ಮನೋರಂಜನ್ ಡಿ (Manoranjan D) ಇವರಿಬ್ಬರೂ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಹೊಗೆ ಸೂಸುವ ಕಡ್ಡಿಯಿಂದ ದಾಳಿ ನಡೆಸಿದರೆ, ಸಂಸತ್ ಭವನದ ಆವರಣದಲ್ಲಿ ಹರಿಯಾಣ ಮೂಲದ ನೀಲಂ ದೇವಿ ಯಾದವ್ (Neelam Devi Yadav) ಮತ್ತು ಅಮೋಲ್ ಸಿಂಧೆ (Amol Shinde) ಹೊಗೆ ಸೂಸುವ ಕಡ್ಡಿಗಳಿಂದ ದಾಳಿ ನಡೆಸಿದ್ದರು.
ಇವರಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ಗೆ ವೀಕ್ಷಕರ ಗ್ಯಾಲರಿ ಪಾಸ್ ಕೊಟ್ಟಿದ್ದು ಮೈಸೂರು-ಕೊಡಗು ಮೂಲದ ಸಂಸದ ಪ್ರತಾಪ್ ಸಿಂಹ.
No Result
View All Result
error: Content is protected !!