ADVERTISEMENT
ಮಹತ್ವದ ಬೆಳವಣಿಗೆಯಲ್ಲಿapp ಆಧಾರಿತ ಆಟೋ ಮತ್ತು ಕ್ಯಾಬ್ ಸೇವೆ ನೀಡುವ ಓಲಾ ಮತ್ತು ಊಬರ್ ವಿಲೀನ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.
ಓಲಾದ ಸಹ ಸಂಸ್ಥಾಪಕ ಭವೇಶ್ ಅಗರ್ವಾಲ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಊಬರ್ ಕಂಪನಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಪ್ರಮುಖ ಆರ್ಥಿಕ ದೈನಿಕ ಏಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.
ನಾಲ್ಕು ವರ್ಷಗಳ ಹಿಂದೆಯೂ ಇದೇ ರೀತಿಯಾದ ವಿಲೀನ ಮಾತುಕತೆ ನಡೆದಿತ್ತು.
ಕೋವಿಡ್ ನಂತರ ಓಲಾ ಮತ್ತು ಊಬರ್ಗೆ ಬೇಡಿಕೆ ಇಳಿದ ಹಿನ್ನೆಲೆಯಲ್ಲಿ ಸದ್ಯಕ್ಕೆ app ಆಧಾರಿತ ಕ್ಯಾಬ್ ಮತ್ತು ಆಟೋ ಸೇವೆ ನೀಡುವುದಕ್ಕೆ ಈ ಎರಡೂ ಕಂಪನಿಗಳ ನಡುವೆ ಮಾರುಕಟ್ಟೆಯಲ್ಲಿ ಅಷ್ಟೇನೂ ಪೈಪೋಟಿ ನಡೆಯುತ್ತಿಲ್ಲ.
ಓಲಾ ಈಗಾಗಲೇ 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ ಮತ್ತು ಇನ್ನೂ 1 ಸಾವಿರ ಮಂದಿಯನ್ನು ತೆಗೆದುಹಾಕುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಓಲಾದ ಜೊತೆಗೆ ವಿಲೀನ ಆಗುವ ಬದಲು ಭಾರತದಲ್ಲಿ ಓಲಾವನ್ನು ಸ್ವಾಧೀನಪಡಿಸಿಕೊಳ್ಳಲು ಊಬರ್ ಯೋಚನೆ ಮಾಡುತ್ತಿದೆ ಎಂದೂ ಏಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಓಲಾದಲ್ಲಿ ಪ್ರತಿ ವರ್ಷ 100 ಕೋಟಿ ಮಂದಿ ಪ್ರಯಾಣಿಸುತ್ತಿದ್ದಾರೆ. 15 ಲಕ್ಷ ಚಾಲಕರು ಓಲಾದ ಜೊತೆಗೆ ಟೈಅಪ್ ಆಗಿದ್ದಾರೆ. 250 ನಗರಗಳಲ್ಲಿ ಓಲಾ ಸೇವೆ ನೀಡ್ತಿದ್ದು, 7 ಸಾವಿರ ಮಂದಿ ನೌಕರರು ಕಂಪನಿಯಲ್ಲಿದ್ದಾರೆ.
ADVERTISEMENT