ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ಸ್ಕೂಟರ್ಗಳು ಹೊಸ ತಲ್ಲಣ ಸೃಷ್ಟಿಸಿರುವುದು ನಿಜ. ಆದರೆ ಓಲಾ ಕಂಪನಿಯ ಬ್ಯಾಟರಿ ಚಾಲಿತ ಸ್ಕೂಟರ್ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುವ ಘಟನೆ ನಡೆದಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೀದಿಯಲ್ಲಿ ಇದ್ದಕಿದ್ದಂತೆ ಹೊತ್ತಿ ಉರಿದಿದೆ.
ಪುಣೆಯಲ್ಲಿ ಓಲಾ ಎಸ್1 ಪ್ರೋ ಸಿರೀಸ್ನ ಎಲೆಕ್ಟ್ರಿಕ್ ಸ್ಕೂಟರ್ ಇದಕಿದ್ದಂತೆ ಹೊತ್ತಿ ಉರಿದಿದೆ. ಓಲಾ ಸ್ಕೂಟರ್ ಹೊತ್ತಿ ಉರಿಯುತ್ತಿರುವ 31 ನಿಮಿಷದ ವೀಡಿಯೋ ಲಭ್ಯವಾಗಿದೆ.
Ola scooter in flames highlights safety issues with batteries. NMC cells more prone to ‘Thermal Runaway’ or spontaneous fires than LFP cells. @OlaElectric must investigate & give us answers. Thank God no one injured and # burnol not needed! pic.twitter.com/kupn2fANTP
— Hormazd Sorabjee (@hormazdsorabjee) March 26, 2022
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಲಿಥಿಯಂ ಬ್ಯಾಟರಿ ಇರುತ್ತದೆ. ಒಂದು ವೇಳೆ ಆ ಬ್ಯಾಟರಿಗೆ ಹಾನಿ ಆದ್ದಲ್ಲಿ ಅಥವಾ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದಲ್ಲಿ ಅಥವಾ ಉಷ್ಣಾಂಶ ಹೆಚ್ಚಳದಿಂದ ಬ್ಯಾಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ಸಲ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡಲ್ಲಿ ಅದನ್ನು ಆರಿಸುವುದು ಕಷ್ಟ. ಜೊತೆಗೆ ಹೈಡ್ರೋಜನ್ ಗ್ಯಾಸ್ ಬೆಂಕಿಯ ತೀವ್ರತೆಯನ್ನು ಹೆಚ್ಚಿಸುತ್ತದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ತನಿಖೆ ಮಾಡುತ್ತಿರುವುದಾಗಿ ಓಲಾ ಕಂಪನಿ ಹೇಳಿದೆ.
ಬ್ಯಾಟರಿಗಳಲ್ಲಿ ಕಳಪೆ ಗುಣಮಟ್ಟದ ಐಯಾನ್ ಸೆಲ್ಸ್ಗಳನ್ನು ಬಳಕೆ ಮಾಡಿದರೂ ಬೆಂಕಿ ಹೊತ್ತಿಕೊಳ್ಳಲು ಕಾರಣ ಆಗುತ್ತದೆ.
ಅಂದರೆ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಪ್ಯೂರ್ ಇವಿ ಮತ್ತು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲೂ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಓಲಾದಂತ ಪ್ರಸಿದ್ಧ ಕಂಪನಿ ತಯಾರಿಸುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಇದೇ ಮೊದಲು.