ADVERTISEMENT
ಒಡಿಶಾದಲ್ಲಿ ಸಂಭವಿಸಿರುವ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಪಘಾತ ಸಂಭವಿಸಿದ ಬಾಲಸೋರ್ನ ರೈಲು ಹಳಿಗಳ ಪಕ್ಕದಲ್ಲಿರುವ ಕಟ್ಟಡ ಮಸೀದಿ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ರೈಲು ಅಪಘಾತ ಸ್ಥಳದ ಮೂಲ ಫೋಟೋವನ್ನು ಕತ್ತರಿಸಿ ಹಳಿಗಳ ಪಕ್ಕದಲ್ಲಿರುವ ಕಟ್ಟಡ ಮಸೀದಿ ಎಂಬಂತೆ ಬಿಂಬಿಸುವ ಯತ್ನ ಮಾಡಿದ್ದಾರೆ.
ಮೂಲತಃ ಹಳಿಗಳ ಪಕ್ಕದಲ್ಲಿರುವ ಕಟ್ಟಡ ದೇವಸ್ಥಾನವಾಗಿದೆ.
ಈ ಹಿನ್ನೆಲೆಯಲ್ಲಿ ರೈಲು ಅಪಘಾತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಒಡಿಶಾ ಪೊಲೀಸರು ಎಚ್ಚರಿಸಿದ್ದಾರೆ.
ADVERTISEMENT