ಅರಳಿ ಕಟ್ಟೆ ಮೇಲೆ ಕುಳಿತು ಹೀಗೆ ಲ್ಯಾಪ್ ಟಾಪ್ ಹಿಡಿದು ಕುಳಿತ ಇವರೆಲ್ಲ ವರ್ಕ್ ಫ್ರಮ್ ಹೋಮ್ ನಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್ ಎಂಜಿನಿಯರ್ ಗಳು.
ಕಳೆದ ವಾರ ಆಂಧ್ರದ ಕೋನಸೀಮದಲ್ಲಿ ಹಿಂಸಾಚಾರ ಸಂಭವಿಸಿದ್ದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಇಂಟೆರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ವರ್ಕ್ ಫ್ರಮ್ ಹೋಂ ನಲ್ಲಿ ಇರುವ ಟೆಕ್ಕಿಗಳು ಮತ್ತು ಇತರೆ ಉದ್ಯೋಗಿಗಳ ಮೇಲಾಗಿದೆ.
ವರ್ಕ್ ಫ್ರಮ್ ಹೋಂ ನಲ್ಲಿ ಕೆಲಸ ಮಾಡಲೇಬೇಕಿರುವ ಕಾರಣ ಜಿಲ್ಲೆಯ ಗಡಿ ಭಾಗದ ಪರಿಸರಗಳಲ್ಲಿ, ಎಲ್ಲಿ ಇಂಟೆರ್ ನೆಟ್ ಸೇವೆ ಇರುತ್ತೋ ಅಲ್ಲೆಲ್ಲಾ ಕುಳಿತು ಕೆಲಸ ಮಾಡುತ್ತಿದ್ದಾರೆ.
ಪಾಪ ಸಾಫ್ಟ್ ವೇರ್ ಮಂದಿ ಇಂಥಾದೊಂದು ದಿನ ಬರುತ್ತೆ ಎಂದು ಎಣಿಸಿರಾಲಿಕ್ಕಿಲ್ಲ.