ಚಿನ್ನ ಖರೀದಿ, ಮಾರಾಟಕ್ಕೆ ಇವತ್ತಿನಿಂದ ಹೊಸ ನಿಯಮ

ಇಂದಿನಿಂದ ದೇಶದಲ್ಲಿ ಆಭರಣ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ಜಾರಿಯಾಗಿದೆ.

ಏಪ್ರಿಲ್​ 1ರಿಂದ ದೇಶದಲ್ಲಿ 6 ಅಂಕಿಗಳಿರುವ ಹಾಲ್​ಮಾರ್ಕ್​ ಐಡಿ ಇರುವ ಚಿನ್ನವನ್ನು ಮಾರಾಟ ಮಾಡಲು ಅವಕಾಶ ಇದೆ.

ಅಂದರೆ ಇವತ್ತಿನಿಂದ 4 ಅಂಕಿಗಳ ಹಾಲ್​ಮಾರ್ಕ್​ ಐಡಿ ಇರುವ ಚಿನ್ನವನ್ನು ಮಾರಾಟ ಮಾಡುವಂತಿಲ್ಲ.

ಪ್ರತಿಯೊಂದು ಆಭರಣಕ್ಕೂ ಪ್ರತ್ಯೇಕವಾದ 6 ಅಂಕಿಗಳ ಹೆಚ್​ಯುಐಡಿ (Hallmark Unique Identification) ಸಂಖ್ಯೆಯನ್ನು ನೀಡಲಾಗುತ್ತದೆ.

ಈ ಹಾಲ್​ಮಾರ್ಕ್​ ಸಂಖ್ಯೆಯನ್ನು ಭಾರತೀಯ ಗುಣಮಟ್ಟ ದಳ (BIS)ನ App ಮೂಲಕವೋ ಪರಿಶೀಲನೆ ಮಾಡಬಹುದು.

ಹಾಲ್​ಮಾರ್ಕ್​:

ಹಾಲ್​ಮಾರ್ಕ್​ ಎಂದರೆ ಚಿನ್ನದ ಪರಿಶುದ್ಧತೆಯ ಮಾಪನ. ಚಿನ್ನ ಅತ್ಯಂತ ತೆಳುವಾದ ಲೋಹವಾಗಿದ್ದು, ಅವುಗಳಿಗೆ ಇತರೆ ಲೋಹಗಳನ್ನು ಮಿಶ್ರಣ ಮಾಡಿದರೆ ಆಗ ಅಂತಹ ಚಿನ್ನ ಪರಿಶುದ್ಧವಾಗಿರಲ್ಲ.

ಮಾಹಿತಿಗಳ ಪ್ರಕಾರ ಭಾರತದಲ್ಲಿ 10.56 ಕೋಟಿಯಷ್ಟು ಹಾಲ್​ಮಾರ್ಕ್​ ಆಗಿರುವ ಚಿನ್ನಾಭರಣ ಇದೆ.

ಆಭರಣದ ಮೇಲೆ 916 ಎನ್ನುವುದು ಆ ಚಿನ್ನಾಭರಣದಲ್ಲಿ ಬಂಗಾರದ ಪ್ರಮಾಣ ಶೇಕಡಾ 91.6ರಷ್ಟಿದೆ ಎಂಬ ಮಾಹಿತಿ. 

6 ವಿಧದ ಚಿನ್ನ: ಭಾರತದಲ್ಲಿ 6 ವಿಧದ ಬಂಗಾರದ ಮಾರಾಟಕ್ಕೆ ಅನುಮತಿ ಇದೆ. 14 ಕ್ಯಾರೆಟ್​, 18 ಕ್ಯಾರೆಟ್​, 22 ಕ್ಯಾರೆಟ್​, 23 ಕ್ಯಾರೆಟ್​ ಮತ್ತು 24 ಕ್ಯಾರೆಟ್​.

24 ಕ್ಯಾರೆಟ್​ ಚಿನ್ನ ಅಪ್ಪಟ ಚಿನ್ನ. ಈ ಆಭರಣದಲ್ಲಿ ಶೇಕಡಾ 99.99ರಷ್ಟು ಚಿನ್ನವನ್ನು ಬಳಸಲಾಗಿರುತ್ತದೆ.

22 ಕ್ಯಾರೆಟ್​ ಆಭರಣ 916 ಹಾಲ್​ಮಾರ್ಕ್​ ಹೊಂದಿರುವ ಚಿನ್ನವಾಗಿದ್ದು ಶೇಕಡಾ 91.6ರಷ್ಟು ಚಿನ್ನವನ್ನು ಹೊಂದಿರುತ್ತದೆ.

18 ಕ್ಯಾರೆಟ್​ ಆಭರಣದಲ್ಲಿ ಶೇಕಡಾ 75ರಷ್ಟು ಚಿನ್ನ,  ಉಳಿದ ಶೇಕಡಾ 25ರಷ್ಟು ಸತು, ತಾಮ್ರವನ್ನು ಮಿಶ್ರಣ ಮಾಡಲಾಗಿರುತ್ತದೆ. 14 ಕ್ಯಾರೆಟ್​ ಆಭರಣದಲ್ಲಿ ಚಿನ್ನದ ಪ್ರಮಾಣ ಶೇಕಡಾ 14.7ರಷ್ಟಿರುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 9 ಮತ್ತು 10 ಕ್ಯಾರೆಟ್​ ಚಿನ್ನ ಮಾರಾಟಕ್ಕೆ ಅನುಮತಿ ಇದೆಯಾದರೂ ಭಾರತದಲ್ಲಿ ಅನುಮತಿ ಇಲ್ಲ.