Bengaluru: ಜುಲೈ 10ರಿಂದ 1 ತಿಂಗಳು ದಿನಕ್ಕೆ 2 ಗಂಟೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಓಡಲ್ಲ

ಜುಲೈ 10ರಿಂದ ಆಗಸ್ಟ್​ 9ರವರೆಗೆ ಬೈಯಪ್ಪನಹಳ್ಳಿ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್​ (ಎಸ್​ ವಿ ರೋಡ್​) ಕೃಷ್ಣರಾಜಪುರಂ ಮತ್ತು ವೈಟ್​ಫೀಲ್ಡ್​ ಮೆಟ್ರೋ ಸ್ಟೇಷನ್​ಗಳ ನಡುವೆ (Purple Lane) ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ  ಮೆಟ್ರೋ ರೈಲುಗಳ ಓಡಾಟ ಇರಲ್ಲ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಗ್ನಲ್​ ಸೇರಿದಂತೆ ಇತರೆ ದುರಸ್ತಿ ಕಾರ್ಯಗಳ ಹಿನ್ನೆಲೆಯಲ್ಲಿ ಮೆಟ್ರೋ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ. 

ಆದ್ರೆ ಈ ಮಾರ್ಗದಲ್ಲಿ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ರೈಲು ಓಡಾಟ ಮತ್ತೆ ಆರಂಭವಾಗಿ ರಾತ್ರಿ 11 ಗಂಟೆಯವರೆಗೆ ಸಂಚರಿಸಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ.

ಆದರೆ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್​ ಮತ್ತು ಕೆಂಗೇರಿ ನಡುವೆ ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೆಟ್ರೋ ರೈಲು ಓಡಾಡಲಿದೆ.

ಆದರೆ ಹಸಿರು ಬಣ್ಣದ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟದಲ್ಲಿ ಯಾವುದೇ ವ್ಯತ್ಯಯ ಇರಲ್ಲ ಎಂದು ನಮ್ಮ ಮೆಟ್ರೋ ಹೇಳಿದೆ.

LEAVE A REPLY

Please enter your comment!
Please enter your name here