ADVERTISEMENT
ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ವೀಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಂಚಿಕೊಳ್ಳುತ್ತಿದ್ದ ಯುವಕನ ಮೇಲೆ ಪ್ರಕರಣ ದಾಖಲಾಗಿದೆ ಜೊತೆಗೆ ದಂಡವನ್ನೂ ವಿಧಿಸಲಾಗಿದೆ.
ಸಂತೋಷ್ ಕುಮಾರ್ ಎಂಬ ನಮ್ಮ ಮೆಟ್ರೋ ರೈಲಿನ ಒಳಗಡೆ ಇದ್ದಕಿದ್ದಂತೆ ಕಿರುಚುತ್ತಿದ್ದ ಮತ್ತು ರೈಲಿನೊಳಗಿದ್ದ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಚಿತ್ರೀಕರಿಸಿ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ತಿದ್ದ.
Yash_Gowda_0271 ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ಈತ 1 ಲಕ್ಷದ 62 ಸಾವಿರ ಮಂದಿ ಫಾಲೋವರ್ಸ್ನ್ನು ಹೊಂದಿದ್ದಾನೆ.
ನಮ್ಮ ಮೆಟ್ರೋ ರೈಲಿನೊಳಗಡೆ ಈತ ಚಿತ್ರೀಕರಿಸಿದ್ದ ವೀಡಿಯೋಗಳನ್ನು ಇನ್ಸ್ಟ್ರಾಂನಿಂದ ಡಿಲೀಟ್ ಮಾಡಿಸಲಾಗಿದೆ. ಈತನ ವಿರುದ್ಧ ನಮ್ಮ ಮೆಟ್ರೋ ವ್ಯಾಪ್ತಿಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದಡಿ ಮೆಟ್ರೋ ಕಾಯ್ದೆಯ ಕಲಂ 59(1)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈತನಿಂದ 500 ರೂಪಾಯಿ ದಂಡವನ್ನೂ ವಸೂಲಿ ಮಾಡಲಾಗಿದ್ದು, ಮುಂದೆ ಇಂತಹ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಲಾಗಿದೆ.
ADVERTISEMENT