ADVERTISEMENT
ಎಂ.ಫಿಲ್ನ್ನು ಪದವಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಧನ ವಿನಿಯೋಗ ಆಯೋಗ ಹೇಳಿದೆ. ಈ ಸಂಬಂಧ ದೇಶದ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಎಚ್ಚರಿಕೆ ನೀಡಿದೆ.
ದೇಶದ ಕೆಲವು ವಿಶ್ವವಿದ್ಯಾನಿಲಯಗಳು ಎಂ.ಫಿಲ್ ಪದವಿಗಾಗಿ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸಿರುವುದು ಗಮನಕ್ಕೆ ಬಂದಿದೆ. ಎಂ.ಫಿಲ್ನ್ನು ಪದವಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
2022ರ ನಿಯಮದ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂ.ಫಿಲ್ ಪದವಿಯನ್ನು ನೀಡುವಂತಿಲ್ಲ ಎಂದು ಯುಜಿಸಿ ಎಚ್ಚರಿಕೆ ನೀಡಿದೆ.
2023-24ರ ಶೈಕ್ಷಣಿಕ ಸಾಲಿನಲ್ಲಿ ಎಂ.ಫಿಲ್ ಪ್ರವೇಶಾತಿ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ವಿಶ್ವವಿದ್ಯಾನಿಲಯಗಳಿಗೆ ಸೂಚಿಸಿದೆ.
ಯಾವುದೇ ಎಂ.ಫಿಲ್ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪಡೆದುಕೊಳ್ಳದಂತೆಯೂ ವಿದ್ಯಾರ್ಥಿಗಳಿಗೆ ಯುಜಿಸಿ ಸೂಚಿಸಿದೆ.
ADVERTISEMENT