ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಗೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಭಾನುವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸಂಸದ ರಾವತ್ ಅವರ ಕುಟುಂಬ ಭಾಗಿಯಾಗಿದೆ ಎನ್ನಲಾಗಿದ್ದ ಪತ್ರಾಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಎರಡು ಬಾರಿ ರಾವತ್ಗೆ ನೋಟಿಸ್ ನೀಡಿತ್ತು.
ಇ.ಡಿ ಸೂಚಿಸಿದ ದಿನಾಂಕದಂದು ರಾಜ್ಯಸಭಾ ಸಂಸದರಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಾವುತ್ ಪರವಾಗಿ ವಕೀಲರು ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಇ.ಡಿ ಅಧಿಕಾರಿಗಳನ್ನು ಭೇಟಿಯಾದ ವಕೀಲರು ಈ ವಿಷಯ ತಿಳಿಸಿದ್ದು, ಆಗಸ್ಟ್ ಮೊದಲ ವಾರದ ಬಳಿಕ ಸಮಯ ನೀಡುವಂತೆ ವಿನಂತಿಸಿದ್ದರು.
ಜುಲೈ 1ರಂದು ರಾವುತ್ ಅವರನ್ನು ತನಿಖೆಗೊಳಪಡಿಸಲಾಗಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ ಅಡಿಯಲ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.