ಮೈಸೂರಿಗೆ ಪ್ರಧಾನಿ ಮೋದಿ – ಪೊಲೀಸರಿಂದ ಮಾರ್ಗ ಬದಲಾವಣೆ ಸುತ್ತೋಲೆ

ನಾಳೆ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರ ಭಾಗದಿಂದ ಬರುವ ಬಸ್‌ಗಳು ನಗರ ಪ್ರವೇಶಿಸದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

ದ್ವಿಚಕ್ರ, 4 ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಆಗಿದೆ.

4 ದಿಕ್ಕುಗಳಿಂದ ಬರುವ ಬಸ್ ಹಾಗೂ ಕಾರುಗಳ ತಾತ್ಕಾಲಿಕ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದ್ದು, ಬೆಂಗಳೂರಿನಿAದ ಬರುವ ಬಸ್ ಗಳಿಗೆ ಜೆ.ಕೆ ಮೈದಾನದಲ್ಲಿ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಾಸನ ಮಾರ್ಗವಾಗಿ ಬರುವ ಬಸ್ ಗಳಿಗೆ ವಿಲೇಜ್ ಹಾಸ್ಟೆಲ್‌ನಲ್ಲಿ ,ಪಿರಿಯಾಪಟ್ಟಣ, ಕೆ ಆರ್ ನಗರ ಬಸ್ ಗಳಿಗೆ ಮೈಸೂರು ವಿವಿ ಪಾರ್ಕಿಂಗ್ ನಲ್ಲಿ, ನಂಜನಗೂಡು, ಚಾಮರಾಜನಗರ ಮಾರ್ಗದ ಬಸ್ ಗಳಿಗೆ ಎನ್‌ಎಸ್‌ಎಸ್ ಕಚೇರಿ ಮೈದಾನ ಹಾಗೂ ಸೊಮಾನಿ ಬಿಎಡ್ ಕಾಲೇಜು ಮೈದಾನದ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಯಾವುದೇ ಬಸ್ ಸಂಚರಿಸದAತೆ ಕ್ರಮಕೊಳ್ಳಲಾಗಿದ್ದು, ಬಸ್ ನಿಲುಗಡೆಗೆ ಸ್ಥಳ ನಿಗದಿ ಮಾಡಿ ಮೈಸೂರು ನಗರ ಪೊಲೀಸ್ ಆದೇಶ ಹೊರಡಿಸಿದೆ.

ನಾಳೆ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಜನಸಾಮಾನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

 

LEAVE A REPLY

Please enter your comment!
Please enter your name here