ತುಳು ಭಾಷೆ ಮತ್ತು ದೈವಾರಾಧನೆ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಅವರು ಮಾಡಿರುವ ಅವಹೇಳನವನ್ನು ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್ ಅವರು ಖಂಡಿಸಿದ್ದಾರೆ.
ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮಾಜಿ ಸಚಿವ ಯು ಟಿ ಖಾದರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ವೇಳೆ ತುಳು ಭಾಷೆ ಮತ್ತು ದೈವಾರಾಧನೆ ಬಗ್ಗೆ ಮಾಧುಸ್ವಾಮಿ ವ್ಯಂಗ್ಯವಾಡಿದ್ದರು.
ತುಳು ಭಾಷೆ ಅತ್ಯಂತ ಪ್ರಾಚೀನವಾದ ಭಾಷೆಗಳಲ್ಲಿ ಒಂದು. ಇಂತಹ ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾಷೆಯ ಕುರಿತಂತೆ, ಅಧಿಕೃತ ಮಾನ್ಯತೆ ನೀಡುವಂತೆ ವಿಧಾನಸಭೆಯಲ್ಲಿ ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಮಾತನಾಡುವಾಗ ತುಳು ಭಾಷೆ ಮತ್ತು ತುಳುನಾಡಿನ ದೈವರಾದನೆಯ ಕುರಿತಾಗಿ ಲಘುವಾಗಿ ಮಾತನಾಡಿ, ಭಾಷೆ ಮತ್ತು ದೈವಗಳ ಕುರಿತು ಅವಹೇಳನ ಮಾಡಿದ ಸಚಿವ ಮಾಧುಸ್ವಾಮಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾಧುಸ್ವಾಮಿ ಮಾತಿನ ವೇಳೆ ಸುಮ್ಮನಿದ್ದ ಕರಾವಳಿಯ ಬಿಜೆಪಿ ಶಾಸಕರು,:
ಹಾಗೆ ಈ ಸಂದರ್ಭದಲ್ಲಿ ಸದನದಲ್ಲಿ ಉಪಸ್ಥಿತರಿದ್ದು ಈ ಅವಹೇಳನವನ್ನು ಮೌನವಾಗಿ ಕೇಳಿಸಿಕೊಂಡ ಕರಾವಳಿಯ ಇತರ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಕಿವಿಮಾತು ಹೇಳಲು ಇಚ್ಚಿಸುತ್ತೇನೆ.
ತುಳುನಾಡಿನ ಶಕ್ತಿಗಳು ಸಚಿವ ಮಾಧುಸ್ವಾಮಿ ಅವರಿಗೆ ಸದ್ಬುದ್ದಿ ಕರುಣಿಸಲಿ. ತುಳುನಾಡಿನ ದೈವಾರಾಧನೆಯ ಕುರಿತು ಮತ್ತು ತುಳು ಭಾಷೆಯ ಬಗ್ಗೆ ಜ್ಞಾನದ ಬೆಳಕನ್ನು ನಾವು ನಂಬುವ ಕಾರಣಿಕ ಶಕ್ತಿಗಳು ಕರುಣಿಸಿ ಸಚಿವರ ಅಜ್ಞಾನ, ದರ್ಪ, ಅಹಂಕಾರ ದೂರವಾಗಲಿ ಎಂದು ಪ್ರಾರ್ಥಿಸುತ್ತೇನೆ