ತಾಂತ್ರಿಕ ಸಮಸ್ಯೆಯಿಂದಾಗಿ ನೇರಳೇ ಮಾರ್ಗದ (Purple line) ಎಂ. ಜಿ. ರಸ್ತೆ ಮತ್ತು ಬೈಯಪ್ಪನ ಹಳ್ಳಿ (MG Road -Baiyappana halli) ನಡುವಿನ ಮೆಟ್ರೋ ರೈಲು (Metro train) ಸಂಚಾರ ಶನಿವಾರ ಮುಂಜಾನೆ ಸ್ಥಗಿತಗೊಂಡಿದೆ.
ಬೆಳಗ್ಗೆ 10.00 ರಿಂದ 11.00 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ಸೇವೆ ಮುಂದುವರೆಯಲಿದೆ. ಮಿಕ್ಕೆಲ್ಲಾ ಮಾರ್ಗಗಳಲ್ಲಿ ಸಂಚಾರ ಸೇವೆ ಯಥಾರೀತಿ ನಡೆಯಲಿದೆ ಎಂದು ಮೆಟ್ರೋ ಪ್ರಕಟಣೆಯ ಮೂಲಕ ತಿಳಿಸಿದೆ.