ಭಾರಿ ಮಳೆ  ನಡುವೆ ಬೆಂಗಳೂರು ಹವಾಮಾನ ಕೇಂದ್ರದ  ಹಿಂದಿ ಪ್ರೇಮ – ಟ್ವಿಟ್ಟರ್ ನಲ್ಲಿ ಆಕ್ರೋಶ

ಬೆಂಗಳೂರು  ಸೇರಿ ದಕ್ಷಿಣ ಒಳನಾಡಿನನಲ್ಲಿ ಕಳೆದ ಐದು  ದಿನಗಳಿಂದ  ಭಾರಿ  ಮಳೆ ಆಗುತ್ತಿದೆ.(#KarnatakaRains) ಮಂದಿನ ಮೂರು ದಿನ ರಣ ಮಳೆ ಆಗುವ  ಮುನ್ಸೂಚನೆ ಇದೆ. ಆದರೆ, ಈ ಬಗ್ಗೆ ಬೆಂಗಳೂರು ಹವಾಮಾನ ಕೇಂದ್ರದ (@metcentre_bng) ಟ್ವಿಟ್ಟರ್ ಮೀಡಿಯಾ ಹ್ಯಾಂಡಲ್ ಮಾಡುವ  ಅಧಿಕಾರಿ  ವರ್ಗ ಯಾವುದೇ ಮಾಹಿತಿಯನ್ನು  ಹಂಚಿಕೊಂಡಿಲ್ಲ.

ಬದಲಿಗೆ ದೆಹಲಿಯ ಅಧಿಕಾರಿ  ವರ್ಗಾವನ್ನು ಮೆಚ್ಚಿಸಲು, ಯಾವುದೊ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಚಾರಗಳನ್ನು  ಹಿಂದಿಯಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media)ಭಾರಿ ಆಕ್ರೋಶ  ವ್ಯಕ್ತವಾಗುತ್ತಿದೆ.

ಹಳೇ  ಮೈಸೂರು ಭಾಗದಲ್ಲಿ  (Old Mysore Region) ಒಂದು ವಾರದಿಂದ ರಣ ಮಳೆ ಆಗುತ್ತಿದ್ದರೂ ಕೇವಲ ಎಲ್ಲೊ ಅಲರ್ಟ್ (Yellow Alert)ನೀಡುತ್ತಿರುವ ಬಗ್ಗೆ ಹವಾಮಾನದ ವಿಚಾರವಾಗಿ  ವಿಶೇಷ ಒಲವು ಹೊಂದಿರುವ ಮೈಸೂರಿನ ಹವ್ಯಾಸಿ ಹವಾಮಾನ ತಜ್ಞ ರವಿಕೀರ್ತಿ ದತ್ತ (@ravikeerthi22)ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ ಅಲರ್ಟ್ ಏಕೆ ಪ್ರಕಟಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ವಾದಕ್ಕೆ ಪೂರಕವಾಗಿ ಹವಾಮಾನದ ಚಿತ್ರವನ್ನು ಲಾಗತ್ತಿಸಿದ್ದಾರೆ.

ಬೆಂಗಳೂರಿನ  ಹವಾಮಾನ ಕೇಂದ್ರ (@metcentre_bng)ಹಿಂದಿಯಲ್ಲಿ ಟ್ವೀಟ್ (Hindi Tweet) ಮಾಡುವುದರಲ್ಲಿ  ಬ್ಯುಸಿ ಇದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಬೆಂಗಳೂರು  ಹವಾಮಾನ ಕೇಂದ್ರ ದೇಶದಲ್ಲಿಯೇ ಅತ್ಯಂತ ಕೆಟ್ಟ ಕೇಂದ್ರ (Worst Centre)ಎಂದು ಕಿಡಿಕಾರಿದ್ದಾರೆ. ಕೇರಳ ಮತ್ತು ಚೆನ್ನೈನ ಹವಾಮಾನ ಕೇಂದ್ರಗಳನ್ನು  ನೋಡಿ ಕಲಿಯಬೇಕು ಎಂದು ಬುದ್ದಿವಾದ ಹೇಳಿದ್ದಾರೆ.

ರವಿಕೀರ್ತಿ ದತ್ತ ( @ravikeerthi22 )ಅವರ ಟ್ವೀಟ್ ಬೆಂಬಲಿಸಿ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಹವಾಮಾನ ಕೇಂದ್ರದ ಹಿಂದಿ ಪ್ರೇಮದ ಬಗ್ಗೆ ಆಕ್ರೋಶ  ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here