BREAKING: ಮೇಲುಕೋಟೆಯಲ್ಲಿ ಕಾಂಗ್ರೆಸ್​ನಿಂದ ದರ್ಶನ್​ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸಾಧ್ಯತೆ

ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್​ ಪುಟ್ಟಣ್ಣಯ್ಯ  ಅವರಿಗೆ ಕಾಂಗ್ರೆಸ್​ ಬೆಂಬಲವನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯೂ ದರ್ಶನ್​ ಪುಟ್ಟಣ್ಣಯ್ಯ ಅವರು ಸ್ಪರ್ಧೆ ಮಾಡುತ್ತಿದ್ದಾರೆ.

ಈ ಬಾರಿ ದರ್ಶನ್​ ಪುಟ್ಟಣಯ್ಯ ಮತ್ತು ಹಾಲಿ ಶಾಸಕ ಸಿ ಎಸ್​ ಪುಟ್ಟರಾಜು ಅವರ ನಡುವೆ ನೇರ ಹಣಾಹಣಿ ಇದೆ.

2013ರಲ್ಲೂ ಕೆ ಎಸ್​ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಪರೋಕ್ಷವಾಗಿ​ ಮೇಲುಕೋಟೆಯಲ್ಲಿ ಬೆಂಬಲಿಸಿತ್ತು. ಆಗ ಪುಟ್ಟಣಯ್ಯ ಅವರು ಗೆದ್ದು ಶಾಸಕರೂ ಆದರು. ಹೀಗಾಗಿ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಸದಸ್ಯರಾಗಿದ್ದ ಎಲ್​ಡಿ ರವಿ ಠೇವಣಿ ಕಳೆದುಕೊಂಡು ಸೋಲಬೇಕಾಯಿತು.

2018ರ ಚುನಾವಣೆಯಲ್ಲಿ ದರ್ಶನ್​ ಅವರು ಸ್ವರಾಜ್​ ಇಂಡಿಯಾದಿಂದ ಸ್ಪರ್ಧಿಸಿ 77 ಸಾವಿರ ಮತಗಳನ್ನು ಪಡೆದಿದ್ದರು. 

ಮೇಲುಕೋಟೆಯಲ್ಲಿ ಹಾಲಿ ಶಾಸಕ ಪುಟ್ಟರಾಜು ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ದರ್ಶನ್​ ಅವರಿಗೆ ಈ ಬಾರಿಯೂ ಕಾಂಗ್ರೆಸ್​ ಬೆಂಬಲಿಸಿದರೆ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಬಹುದು ಎಂಬುದು ಲೆಕ್ಕಾಚಾರ.

LEAVE A REPLY

Please enter your comment!
Please enter your name here