ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಆಡಿರುವ ಮಾತು ಈಗ ಪಕ್ಷಕ್ಕೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿರುವ ಲಿಂಗಾಯತ ಮತ್ತು ಬ್ರಾಹ್ಮಣ ನಾಯಕರು ಕೆ ಜಿಗಟ್ಟಲೆ ಮಾಂಸ ತಿಂತಾರೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ದೂರವಾಣಿಯೊಂದಿಗೆ ಮಾತಾಡುವ ವೇಳೆ ವರ್ತೂರು ಅವರು ಈ ಮಾತುಗಳನ್ನು ಆಡಿದ್ದಾರೆ.
ಈ ನಮ್ಮ ಗದಗ ಜಿಲ್ಲೆ, ಹುಬ್ಬಳ್ಳಿ ಜಿಲ್ಲೆನಲ್ಲಿ 12 ಜನ ಲಿಂಗಾಯತ ಎಂಎಲ್ಎಗಳು ಅಣ್ತಮ್ಮಂದಿರು, ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು.ಒಬ್ಬೊಬ್ಬ ಒಂದೊಂದು ಕೆಜಿ ತಿನ್ತಾರೆ ಸರ್. ದೇವ್ರಾಣೆ, ನನ್ ಜೊತೆ, ನನ್ನ ಫ್ರೆಂಡ್ಸ್ ಅವ್ರೆಲ್ಲರೂನು.
ಒಬ್ಬ ಮಿನಿಸ್ಟರ್ ಅವ್ನಲ್ಲ ಬ್ರಾಹ್ಮಣ ಲೇಬರ್ ಮಿನಿಸ್ಟ್ರೇನೋ ಕಾಂಗ್ರೆಸ್ನಿಂದ ಹೊಸದಾಗಿ ಬಿಜೆಪಿಗೆ ಬಂದ್ನಲ್ಲ (ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್) ನನ್ನ ತಾಯಿಯಾಣೆ ಒಂದೂವರೆ ಕೆಜಿ ಮಾಂಸ ತಿನ್ತಾನೆ ಸರ್.
ವೆಂಕಟಸ್ವಾಮಿ ಸತ್ಯವಾಗ್ಲೂ ನಾನೇ ಸಾರ್ ಹಾಕ್ಕೋಡುದು.
ನೀವು ಒಬ್ರೇ ಸರ್ ದೇವ್ರಾಣೆ ಒಳ್ಳೆಯವರು
ಎಂದು ದೂರವಾಣಿಯಲ್ಲಿ ವರ್ತೂರು ಪ್ರಕಾಶ್ ಆಡಿರುವ ಮಾತು ಸುದ್ದಿಗೋಷ್ಠಿಗೆ ವೇದಿಕೆಯಲ್ಲಿ ಹಾಕಲಾಗಿದ್ದ ಮೈಕ್ನಲ್ಲಿ ದಾಖಲಾಗಿದೆ.
ಸಿದ್ದರಾಮಯ್ಯ ಎದುರು 50 ಸಾವಿರ ವೋಟುಗಳಿಂದ ಗೆಲ್ಲಲಿಲ್ಲ ಅಂದ್ರೆ ನಿಮಗೆ ಮುಖ ತೋರಿಸಲ್ಲ ಸಾರ್ ನಾನು
ಎಂದು ದೂರವಾಣಿಯಲ್ಲಿ ವರ್ತೂರು ಪ್ರಕಾಶ್ ಮಾತಾಡಿದ್ದಾರೆ.
ADVERTISEMENT
ADVERTISEMENT