ಕಾಂಗ್ರೆಸ್​ ಸೇರಿದ ಪಕ್ಷೇತರ ಶಾಸಕಿ – ಕಾಂಗ್ರೆಸ್​ ಬಲಾಬಲ ಹೆಚ್ಚಳ

ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್​ ಅವರು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ಇವತ್ತು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸದಸ್ಯೆಯಾಗಿ ಲತಾ ಮಲ್ಲಿಕಾರ್ಜುನ್​ ಅವರ ಸೇರ್ಪಡೆಯನ್ನು ಶಾಸಕಾಂಗ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದರು.

ಲತಾ ಮಲ್ಲಿಕಾರ್ಜುನ್​ ಅವರ ಸೇರ್ಪಡೆಯೊಂದಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಬಲಾಬಲ 136ಕ್ಕೆ ಏರಿಕೆ ಆಗಿದೆ.

ಕಾಂಗ್ರೆಸ್​ನಿಂದ ಟಿಕೆಟ್​ ಸಿಗದ ಕಾರಣ ಲತಾ ಮಲ್ಲಿಕಾರ್ಜುನ್​ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 

ಇವರು ಬಿಜೆಪಿ ಅಭ್ಯರ್ಥಿ ಜಿ ಕರುಣಾಕರ ರೆಡ್ಡಿ ವಿರುದ್ಧ 13,845 ಮತಗಳಿಂದ ಲತಾ ಅವರು ಗೆದ್ದಿದ್ದರು.

ಲತಾ ಮಲ್ಲಿಕಾರ್ಜುನ್​ ಅವರು ಉಪಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ ಪಿ ಪ್ರಕಾಶ್​ ಅವರ ಮಗಳು.