ಮಂತ್ರಿ ಆಗುವ ದಿನವೇ ಅಜ್ಜಿಯಾದ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಕೆಲವೇ ಹೊತ್ತಲ್ಲಿ ಮಂತ್ರಿ ಆಗಲಿದ್ದಾರೆ. ಮೊದಲ ಬಾರಿಗೆ ಮಂತ್ರಿ ಆಗುತ್ತಿರುವ ಎರಡು ಬಾರಿ ಗೆದ್ದಿರುವ 47 ವರ್ಷದ ಶಾಸಕಿ ಹೆಬ್ಬಾಳ್ಕರ್​​ ನಿನ್ನೆಯಿಂದ ಅಜ್ಜಿ ಆಗಿದ್ದಾರೆ.

ಹೌದು, ಲಕ್ಷ್ಮೀ ಹೆಬ್ಬಾಳ್ಕರ್​ ದಂಪತಿಯ ಸೊಸೆ ಹಿತಾ ಹೆಬ್ಬಾಳ್ಕರ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹಿತಾ ಅವರು ಪುತ್ರಿಗೆ ಜನ್ಮ ನೀಡಿದ್ದಾರೆ.

2020ರ ನವೆಂಬರ್​ನಲ್ಲಿ ಹೆಬ್ಬಾಳ್ಕರ್​ ದಂಪತಿ ಪುತ್ರ ಮೃಣಾಲ್​ ಅವರು ಭಧ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್​ ಅವರ ಸಹೋದರ ಬಿ ಕೆ ಶಿವಕುಮಾರ್​ ಅವರ ಪುತ್ರಿ ಹಿತಾ ಅವರನ್ನು ಮದುವೆಯಾಗಿದ್ದರು. ಗೋವಾದ ಲೀಲಾ ಪ್ಯಾಲೆಸ್​ನಲ್ಲಿ ಅದ್ಧೂರಿ ಮದುವೆ ನಡೆದಿತ್ತು.

ಮೃಣಾಲ್​ ಹೆಬ್ಬಾಳ್ಕರ್​ ಅವರು ಕೂಡಾ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದರು ಕರ್ನಾಟಕ ಕಾಂಗ್ರೆಸ್​ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.