242 ಹುದ್ದೆಗಳಿಗೆ KPSC ಯಿಂದ ಅರ್ಜಿ ಅಹ್ವಾನ – ಎಷ್ಟು ಸಂಬಳ..? ವಿದ್ಯಾರ್ಹತೆ ಏನು..?

242 ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿರುವ ಉಳಿಕೆ ಮೂಲ ವೃಂದದ 242 ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮಾರ್ಚ್​ 23ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಲಿದ್ದು, ಏಪ್ರಿಲ್​ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಏಪ್ರಿಲ್​ 24 ಶುಲ್ಕ ಪಾವತಿಗೆ ಕೊನೆಯ ದಿನ.

ವೇತನ ಶ್ರೇಣಿ: 27,650 ರೂ.ಗಳಿಂದ 52,650 ರೂ.

ವಿದ್ಯಾರ್ಹತೆ: ಬಿಕಾಂ, ಬಿಬಿಎ ಮತ್ತು ಬಿಬಿಎಂ ಪದವೀಧರರು.

ಗ್ರೂಪ್​ ಸಿ ಹುದ್ದೆಯಾಗಿರುವ ಕಾರಣ ಎರಡು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಶುಲ್ಕ: 

ಸಾಮಾನ್ಯ ಅಭ್ಯರ್ಥಿಗೆ: 600 ರೂ., ಹಿಂದುಳಿದ ಅಭ್ಯರ್ಥಿಗಳಿಗೆ – 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 50 ರೂ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಈ ಲಿಂಕ್​ಗೆ ಕ್ಲಿಕ್​ ಮಾಡಿ. https://kpsc.kar.nic.in/

LEAVE A REPLY

Please enter your comment!
Please enter your name here