ಕರ್ನಾಟಕದಲ್ಲಿ ಹೊಸದಾಗಿ 1,137 ಪೊಲೀಸ್ ನೇಮಕಾತಿಗೆ ಅಧಿಸೂಚನೆ ಪ್ರಕಟ – ಇಲ್ಲಿದೆ ಸಂಪೂರ್ಣ ಮಾಹಿತಿ​

Representative Image
ಕರ್ನಾಟಕ ಪೊಲೀಸ್​ ಇಲಾಖೆ (Karnataka Police Recruitment) 1,137 ಸಿವಿಲ್​ ಪೊಲೀಸ್​ ಕಾನ್ಸ್​ಸ್ಟೇಬಲ್​ಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಪುರುಷ ಅಭ್ಯರ್ಥಿಗಳಿಗೆ 817 ಹುದ್ದೆಗಳನ್ನು, ಮಹಿಳಾ ಅಭ್ಯರ್ಥಿಗಳಿಗೆ 286 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ತೃತೀಯ ಲಿಂಗಿಗಳಿಗೆ 34 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ವಯೋಮಿತಿ: ಕನಿಷ್ಠ 19 ವರ್ಷ ಆಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ.
ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ
ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್​ 10, 2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್​ 11, 2022
ಶುಲ್ಕ ಪಾವತಿಗೆ ಕೊನೆ ದಿನ: ನವೆಂಬರ್​ 23, 2022
ಶುಲ್ಕ:
ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 400 ರೂ.
ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ: 200 ರೂಪಾಯಿ.
ಕೆನರಾ ಬ್ಯಾಂಕ್​ ಅಥವಾ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಸಬಹುದು.
ವಿದ್ಯಾರ್ಹತೆ:
ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ ಶ್ರೇಣಿ:
ಆರಂಭಿಕ ವೇತನ: 23,500 ರೂ. ಗರಿಷ್ಠ ವೇತನ: 47,650 ರೂ.
ಆಯ್ಕೆ ಪ್ರಕ್ರಿಯೆ:
ಆರಂಭದಲ್ಲಿ ಲಿಖಿತ ಪರೀಕ್ಷೆ. ಲಿಖಿತ ಪರೀಕ್ಷೆಯ ಬಳಿಕ 1:5 ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಬೇಕಾಗಿರುವ ವೆಬ್​ಸೈಟ್​: https://ksp-recruitment.in/