ಕೇಂದ್ರ ಸಚಿವೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಚುನಾವಣಾ ಆಯೋಗ ದಾಖಲಿಸಿದ್ದ ಪ್ರಕರಣದ ತನಿಖೆಗೆ ತಡೆ ನೀಡಿದೆ.
ಬೆಂಗಳೂರಿನ ನಗರ್ತ್ಪೇಟೆಯಲ್ಲಿ ಹನುಮಾನ ಚಾಲೀಸ ಹಾಕಿದ್ದಕ್ಕೆ ಉತ್ತರ ಭಾರತ ಮೂಲದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟಿಸಿತ್ತು.
ಆ ವೇಳೆ ಮಾಧ್ಯಮಗಳೊಂದಿಗೆ ಮಾತಾಡಿದ್ದ ಶೋಭಾ ಕರಂದ್ಲಾಜೆ ಅವರು ತಮಿಳುನಾಡಿನವರು ಅಲ್ಲಿನ ಕಾಡುಗಳಲ್ಲಿ ತರಬೇತಿ ಪಡೆದು ಬೆಂಗಳೂರಲ್ಲಿ ಬಂದು ಬಾಂಬ್ ಇಡ್ತಾರೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ತಮಿಳುನಾಡಿನವರು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆ ದೂರು ಆಧರಿಸಿ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿ ಕಾಯ್ದೆಯ 123(3), 123(3)(ಎ) ಮತ್ತು 125 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಜನಪ್ರತಿನಿಧಿ ಕಾಯ್ದೆಯ ಕಲಂಗಳನ್ನು ಲಗತ್ತಿಸಿ ಪ್ರಕರಣ ದಾಖಲಿಸಿಕೊಂಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಕರಂದ್ಲಾಜೆ ಅರ್ಜಿ ಸಲ್ಲಿಸಿದ್ದರು.
ಕರಂದ್ಲಾಜೆ ಮಾಡಿದ್ದ ಭಾಷಣದಲ್ಲಿ ಮತಕ್ಕಾಗಲೀ ಅಥವಾ ಬೇರೆಯವರ ವಿರುದ್ಧ ಮತ ಹಾಕದಂತೆ ಮಾತುಗಳನ್ನಾಡಿಲ್ಲ. ಹೀಗಾಗಿ ಇದು ಜನಪ್ರತಿನಿಧಿ ಕಾಯ್ದಯಡಿಯಲ್ಲಿ ಪ್ರಕರಣ ದಾಖಲಿಸಲಾಗಲ್ಲ ಎಂದು ಕರಂದ್ಲಾಜೆ ಪರ ವಕೀಲರು ವಾದ ಮಂಡಿಸಿದರು.
ಎಲ್ಲ ನಾಯಕರೂ ಪಕ್ಷಾತೀತವಾಗಿ ಸ್ವಯಂ ಮಿತಿಯನ್ನು ಹೇರಿಕೊಳ್ಳಬೇಕು. ನಮ್ಮದು ನಾಗರಿಕ ಸಮಾಜ, ಇಲ್ಲವಾದ್ರೆ ಅಫ್ಘಾನಿಸ್ತಾನ ಆಗ್ತಿತ್ತು. ಯಾರೂ ಸ್ವತಂತ್ರರಲ್ಲ. ನಿಮ್ಮ ಕಕ್ಷಿದಾರರಿಗೆ ತೂಕದಿಂದ ಮಾತಾಡುವಂತೆ ನ್ಯಾಯಮೂರ್ತಿಗಳು ವಿನಂತಿಸಿದ್ದಾರೆ
ಎಂದು ತಿಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರು.
ADVERTISEMENT
ADVERTISEMENT