ADVERTISEMENT
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕದಿಂದ ಹೋಗುವ ಯಾತ್ರಾರ್ಥಿಗಳ ಸಲುವಾಗಿ ಅತಿಥಿಗೃಹ ನಿರ್ಮಿಸಲು ತೀರ್ಮಾನಿಸಿದೆ.
ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.
ಸರಯೂ ನದಿ ಸಮೀಪ 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಕಟ್ಟಲು ತೀರ್ಮಾನಿಸಲಾಗಿದೆ. ಕರ್ನಾಟಕ ನಿರ್ಮಿಸಲಿರುವ ಯಾತ್ರಿ ನಿವಾಸದಿಂದ ಅಯೋಧ್ಯೆಗೆ ತೆರಳುವ ಕರ್ನಾಟಕದ ಮೂಲದ ಭಕ್ತಾದಿಗಳು ಮತ್ತು ಯಾತ್ರಿಗಳು ಊಟ, ವಸತಿ ವ್ಯವಸ್ಥೆ ಆಗಲಿದೆ.
ಅತಿಥಿಗೃಹ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಪತ್ರ ಬರೆದಿದ್ದರು. ಕರ್ನಾಟಕ ಪತ್ರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ಉತ್ತರಪ್ರದೇಶ ಸರ್ಕಾರದ ಗೃಹ ಮಂಡಳಿ ಪತ್ರ ಬರೆದಿದೆ.
ಇನ್ನೊಂದು ವರ್ಷದಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ತಲೆಯೆತ್ತಲಿದೆ.
ADVERTISEMENT