ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ (Kantara Film) ದೇಶಾದ್ಯಂತ ಸದ್ದು ಮಾಡಲು ಆರಂಭಿಸಿದೆ. ಸೆ.30ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 3 ದಿನ ಮೊದಲೇ ಮುಂಗಡ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದ್ದು, ಈಗಾಗಲೇ ಬುಕ್ಮೈ ಶೋನಲ್ಲಿ ಜನರು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಹೊಂಬಾಳೆ ಬ್ಯಾನರ್ನಡಿ ನಿರ್ಮಾಣಗೊಂಡ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ (Kantara Film) ಪ್ರೇಕ್ಷಕರ ಗಮನ ಸೆಳೆದಿದೆ, ಚಿತ್ರದ ಪೋಸ್ಟರ್, ಟ್ರೈಲರ್ಗಳನ್ನು ನೋಡಿರುವ ಜನ ಚಿತ್ರದ ಬಿಡುಗಡೆಗಾಗಿ ಕಾಯ್ದು ಕುಳಿತಿದ್ದಾರೆ. ಇದನ್ನೂ ಓದಿ : ‘ಕಾಂತಾರ’ ಚಿತ್ರಕ್ಕೆ ಅಧಿಕೃತ ಚಾಲನೆ: ಆನೆಗುಡ್ಡೆ ಗಣಪನ ದೇವಳದಲ್ಲಿ ವಿನಾಯಕ ನಡೆಯಿತು ಮುಹೂರ್ತ
ಇದೀಗ, ಒಂದು ದಿನ ಮೊದಲೇ ದಕ್ಷಿಣದ ಪ್ರಮುಖ ರಾಜ್ಯಗಳಲ್ಲಿ ಚಿತ್ರದ ವಿಶೇಷ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜಿಸಲಾಗಿದೆ. ಸೆ.29ರಂದು ಕರ್ನಾಟಕದ ಕಾಸರಗೋಡು, ಹೈದರಾಬಾದ್, ಚೆನ್ನೈ, ಕೊಚ್ಚಿ ನಗರಗಳು ಕಾಂತಾರ ಚಿತ್ರದ ಪ್ರೀಮಿಯರ್ ಶೋಗಳಿಗೆ ಸಜ್ಜಾಗುತ್ತಿವೆ.
ಪ್ರೀಮಿಯರ್ ಶೋಗಳ ಜತೆಗೆ ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಕುಂದಾಪುರ ಮುಂತಾದ ಕಡೆ ಪೇಯ್ಡ್ ಪ್ರೀಮಿಯರ್ ಶೋಗಳ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಈ ಶೋಗಳ ಟಿಕೆಟ್‌ಗಳು ಶೇ.60ರಷ್ಟು ಮಾರಾಟ ಆಗಿವೆ. ಇನ್ನೂ ಮೂರು ದಿನಗಳ ಒಳಗೆ ಎಲ್ಲ ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್ ಆಗಲಿವೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ, ನಟ ಕಿಶೋರ್, ನಟ ಅಚ್ಯುತ್ ಕುಮಾರ್, ನಟಿ ಸಪ್ತಮಿಗೌಡ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ : ಹೆಂಡತಿಯಷ್ಟೇ ಚೆಂದದ ಮಗಳ ಜನನ – ಖುಷಿ ಹಂಚಿಕೊಂಡ ರಿಷಬ್ ಶೆಟ್ಟಿ