ಮೈಸೂರು ಜಿಲ್ಲೆಯ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೆ ಹರೀಶ್ ಗೌಡ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.
ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಹರೀಶ್ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬ ಸುಳಿವು ಕೊಟ್ಟಿದ್ದಾರೆ ಶಾಸಕ ಮತ್ತು ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಜಮೀರ್ ಅಹ್ಮದ್ಖಾನ್ ಅವರು.
ಹರೀಶಣ್ಣ ಶಕ್ತಿ ನಿಮಗೆಲ್ಲ ಗೊತ್ತೇ ಇರೋದು. ಹರೀಶಣ್ಣ ನಾನು ಬಹಳ ವರ್ಷದಿಂದ ಪರಿಚಯ. ನಾನು ಅವರು ಜನತಾದಳ ಪಕ್ಷದಲ್ಲಿದ್ದವರು. ಹೋದ ಸಲ 2018ರಲ್ಲಿ ಟಿಕೆಟ್ ಸಿಕ್ಕಿಲ್ಲ, ಇಂಡಿಪೆಂಡೆಂಟ್ ಆಗಿ ನಿಂತಿದ್ರು. ಇಂಡಿಪೆಂಡೆಂಟ್ ಆಗಿ ನಿಂತ್ಕೊಂಡೇ ಅವರ ಶಕ್ತಿ ಏನು ಅಂತ ತೋರಿಸಿದ್ದಾರೆ.
ಇವತ್ತು ನಮಗೆ ವಿಶ್ವಾಸ ಇದೆ, ನಮ್ಮ ನಾಯಕರಾದ ಸಿದ್ದರಾಮಯ್ಯನವರು ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ನೂರಕ್ಕೆ ನೂರರಷ್ಟು ಈ ಬಾರಿ ಹರೀಶ್ ಗೌಡ ಅವರಿಗೆ ಟಿಕೆಟ್ ಕೊಡ್ತಾರೆ
ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ಮೂಲಕ ಚಾಮರಾಜ ಕ್ಷೇತ್ರದಲ್ಲೂ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವುದು ಖಚಿತವಾಗಿದೆ.
ಈ ಮೂಲಕ ಮಾಜಿ ಶಾಸಕ ವಾಸು ಅವರಿಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮೂಲಕ ವಾಸು ಲಾಬಿ ನಡೆಸಿದ್ದರೂ ವಾಸು ಅವರಿಗೆ ಟಿಕೆಟ್ ಕೊಟ್ಟರೇ ಚಾಮರಾಜ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂಬ ಕಾರಣಕ್ಕಾಗಿ ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ.
ಚಾಮರಾಜದಲ್ಲಿ 2018ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಹರೀಶ್ ಗೌಡ ಅವರು 21 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು.
ಮೈಸೂರು ರಾಜಕಾರಣಕ್ಕೆ ಜಮೀರ್ ಪ್ರವೇಶ:
ಮೈಸೂರು ರಾಜಕಾರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರವೇಶ ಅಚ್ಚರಿಯೇನಲ್ಲ. ತಮ್ಮ ನಾಯಕ ಸಿದ್ದರಾಮಯ್ಯ ಅವರು ಕೊಡಬೇಕಾಗಿರುವ ಕೆಲವು ಸಂದೇಶಗಳನ್ನು ಸ್ವತಃ ಜಮೀರ್ ಅವರೇ ಆಡುವ ಮೂಲಕ ತಮ್ಮ ಮೈಸೂರು ರಾಜಕಾರಣದಲ್ಲಿ ಜಮೀರ್ ಸದ್ದು ಮಾಡಿದ್ದಾರೆ.