ಕರ್ನಾಟಕದಲ್ಲಿ ಭರ್ಜರಿ ಮಳೆಗಾಲ ಶುರುವಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ನದಿಗಳು ಮೈದುಂಬಿ ಧುಮ್ಮಿಕ್ಕುತ್ತಿವೆ.
ಶಿವಮೊಗ್ಗದಲ್ಲಿನ ಪ್ರಸಿದ್ದ ಜೋಗ ಜಲಪಾತವೂ ಮೈದುಂಬಿ ಹರಿಯುತ್ತಿದೆ. ಪ್ರವಾಸೋದ್ಯಮದ ಪ್ರೋತ್ಸಾಹಕ್ಕಾಗಿ ಜೋಗಜಲಪಾತ ನೋಡಲು ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ಗಳ ಮೂಲಕ ಬಸ್ ಸೌಲಭ್ಯ ಕಲ್ಪಿಸಿದೆ.
ಕೆಎಸ್ಆರ್ಟಿಸಿ ದಾವಣಗೆರೆ ಮತ್ತು ಹರಿಹರದಿಂದ ಶಿವಮೊಗ್ಗದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಸಾರಿಗೆ ಬಸ್ ವ್ಯವಸ್ಥೆ ಮಾಡಿದೆ.
ಜುಲೈ 17 ರಿಂದ ಪ್ರತಿ ರವಿವಾರ ಮತ್ತು ರಜಾ ದಿನಗಳಂದು ಜೋಗ ಜಲಪಾತ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್ನಡಿ ರಾಜಹಂಸ ಬಸ್ ವ್ಯವಸ್ಥೆ ಮಾಡಿದೆ.
ಪ್ಯಾಕೇಜ್ನ ಸಮಯ ಹಾಗೂ ಪ್ರಯಾಣ ದರದ ವಿವರ ಇಂತಿದೆ :
– ಬೆಳಗ್ಗೆ 7 ಗಂಟೆಗೆ ದಾವಣಗೆರೆಯಿಂದ ಬಸ್ ಹೊರಡುತ್ತದೆ. – ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಜೋಗಕ್ಕೆ ಬಸ್ ಹೊರಡುತ್ತದೆ. -ಸಂಜೆ 4.30ಕ್ಕೆ ಜೋಗ ಜಲಪಾತದಿಂದ ದಾವಣಗೆರೆಗೆ ಬಸ್ ಹೊರಡಲಿದೆ.
ದಾವಣಗೆರೆಯಿಂದ ಶಿರಸಿ-ಜೋಗ ವಿಶೇಷ ಪ್ಯಾಕೇಜ್ ದರ ಹೋಗಿಬರಲು ರೂ. 600 ಇದೆ. ಈ ದರ ಮಕ್ಕಳಿಗೆ ರೂ. 450. ಆಗಿದೆ.