ಕೆಜಿಎಫ್ ಸಿನಿಮಾದ ಬಿರುಗಾಳಿ ಹೇಗಿದೆ ಎಂದರೆ ಇದೇ ವಾರ ಬಿಡುಗಡೆ ಆಗಬೇಕಿದ್ದ ಶಹೀದ್ ಕಪೂರ್ ಅಭಿನಯದ ಜೆರ್ಸಿ ಸಿನಿಮಾದ ಬಿಡುಗಡೆ ಮುಂದೂಡಿಕೆ ಆಗಿದೆ.
ಏಪ್ರಿಲ್ 14ರಂದು ಅಂದರೆ ಕೆಜಿಎಫ್ ರಿಲೀಸ್ ಆಗುವ ದಿನವೇ ಜೆರ್ಸಿ ಕೂಡಾ ಬಿಡುಗಡೆ ಆಗಬೇಕಿತ್ತು. ಆದರೆ ಜೆರ್ಸಿ ಸಿನಿಮಾದ ಬಿಡುಗಡೆಯನ್ನು ಒಂದು ವಾರ ಮುಂದೂಡಿ ಅಂದರೆ ಏಪ್ರಿಲ್ 22ರಂದು ಬಿಡುಗಡೆ ಮಾಡಲು ಸಿನಿಮಾ ತಂಡ ನಿರ್ಧರಿಸಿದೆ.
ಕೆಜಿಎಫ್ ಸುನಾಮಿ ಎದುರು ತಮ್ಮ ಚಿತ್ರದ ಬಿಡುಗಡೆ ಆದ್ರೆ ಹಿನ್ನಡೆ ಆಗಬಹುದು, ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆ ಆಗಬಹುದು ಎಂಬ ಆತಂಕದಲ್ಲಿ ಸಿನಿಮಾ ರಿಲೀಸ್ನ್ನು ಜೆರ್ಸಿ ತಂಡ ಒಂದು ವಾರ ಮುಂದೂಡಿದೆ.
ಜೆರ್ಸಿ ಮೂಲತಃ ತೆಲುಗು ಸಿನಿಮಾ. ಖ್ಯಾತ ನಟ ನಾನಿ ನಟಿಸಿದ್ದ ಈ ಸಿನಿಮಾ ತೆಲುಗು ಸಿನಿಮಾ ಲೋಕದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿತ್ತು. ಅದೇ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಿ ಬರ್ತಿದೆ.