BIG BREAKING: ಜೆಡಿಎಸ್​ ಅಭ್ಯರ್ಥಿಗಳಿಂದಲೇ ಮ್ಯಾಚ್​ ಫಿಕ್ಸಿಂಗ್​ – H D ಕುಮಾರಸ್ವಾಮಿ ಗಂಭೀರ ಆರೋಪ

ಜೆಡಿಎಸ್​ ಸೋಲಿಗೆ ಜೆಡಿಎಸ್​ ಅಭ್ಯರ್ಥಿಗಳು ಮ್ಯಾಚ್​ ಫಿಕ್ಸಿಂಗ್​ ಮಾಡಿಕೊಂಡಿದ್ದೇ ಕಾರಣ ಎಂದು ಸ್ವತಃ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್​ ಒಂದೂ ಸೀಟು ಗೆದ್ದಿಲ್ಲ.

ಕಳೆದ ಹಲವು ವರ್ಷಗಳಿಂದ ರಾಜಧಾನಿಯಲ್ಲಿ ಪಕ್ಷದ ಸಂಘಟನೆ ನೆನೆಗುದಿಗೆ ಬಿದ್ದಿದೆ. ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬಿ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನೋ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ

ಎಂದು ಪಕ್ಷದ ಅಭ್ಯರ್ಥಿಗಳೇ ವಿರುದ್ಧವೇ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಪಕ್ಷ  ಸಂಘಟನೆ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ನಗರದ ನಾಲ್ಕು ವಿಭಾಗಕ್ಕೆ ನಾಲ್ವರು ಅಧ್ಯಕ್ಷರನ್ನು ಮಾಡಲಾಗುತ್ತದೆ. ಒಬ್ಬರಿಗೆ ಅಧ್ಯಕ್ಷಗಿರಿ ಕೊಟ್ಟರೆಏಕ ಚಕ್ರಾಧಿಪತ್ಯ ಮಾಡಿಕೊಳ್ಳುತ್ತಾರೆ

ಎಂದು ಬೆಂಗಳೂರು ಜೆಡಿಎಸ್​ ಘಟಕದ ಅಧ್ಯಕ್ಷರ ವಿರುದ್ಧವೂ ಹೆಚ್​ ಡಿ ಕುಮಾರಸ್ವಾಮಿ ಸೋಲಿನ ಹೊಣೆ ಹೊರಿಸಿದರು.

ಅಧ್ಯಕ್ಷಗಿರಿ ಎಂದರೆ ಸ್ವಂತ ಜಹಗೀರು ಅಲ್ಲ, ಸಂಘಟನೆಯನ್ನು ಸರಿಯಾಗಿ ಮಾಡಿಲ್ಲ, ಯಾರೂ ಸಮರ್ಥವಾಗಿ ಕೆಲಸ ಮಾಡಿಲ್ಲ, ಎಲ್ಲಾ ಹಂತಗಳಲ್ಲಿಯೂ ಸಂಘಟನೆ ಸೋತಿದೆ, ನಾನೇ ಅಭ್ಯರ್ಥಿ ಹುಡುಕಿ ಕೊಡಬೇಕಾದ ಪರಿಸ್ಥಿತಿ ಬಂದಿದೆ, ಹಾಗಾದರೆ ಜಿಲ್ಲಾಧ್ಯಕ್ಷರು ಮಾಡಿದ್ದೇನು? ಇವರೇನು ಅಲಂಕಾರಕ್ಕೆ ಇದ್ದಾರಾ..?

ಆರ್ಥಿಕವಾಗಿ ನಾನೆಷ್ಟು ಕಷ್ಟಪಟ್ಟೆ ಎನ್ನುವುದು ನನಗಷ್ಟೇ ಗೊತ್ತು, ಯಾರೂ ನನ್ನ ನೋವು ಹಂಚಿಕೊಳ್ಳಲು ಮುಂದೆ ಬರಲಿಲ್ಲ.

ಹಿಂದೆ ಯಾರನ್ನಾದರೂ ಹಾಳು ಮಾಡಬೇಕಾದರೆ ಹಳೆಯ ಲಾರಿ ಕೊಡಿಸು ಎನ್ನುವ ಮಾತಿತ್ತು. ಈಗ ಯಾರ ಮನೆಯನ್ನಾದರೂ ಹಾಳು ಮಾಡಬೇಕಾದರೆ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಅಭ್ಯರ್ಥಿ ಮಾಡು ಎನ್ನುವಂತೆ  ಆಗಿದೆ. ಈ ಚುನಾವಣೆಯಲ್ಲಿ ಕಂಡಂಥ ಕಟುಸತ್ಯ ಇದು.

ನಿಮ್ಮನ್ನು ಮತೆ ಅಭ್ಯರ್ಥಿಗಳಾಗಿ ಎಂದು ಹೇಳುವ ಧೈರ್ಯ ನನ್ನಲ್ಲಿ ಉಳಿದಿಲ್ಲ

ಎಂದು ಕುಮಾರಸ್ವಾಮಿ ಜೆಡಿಎಸ್​ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿದರು.