ನಾರಾವಿ ದಿ. – ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ!1008
ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು
ದಿನಾಂಕ 22-23-24 ಮಾರ್ಚ್ 2024ರಂದು ನಡೆಯಲಿರುವುದು. ಈ ಸುಸಂದರ್ಭದ ಪ್ರಯುಕ್ತ ಜೈನ
ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳ ವಿವರ ಮತ್ತು
ನಿಯಮಗಳು ಈ ಕೆಳಗಿನಂತಿದೆ.
- ಧರ್ಮನಾಥ ಜಿನ ಸಂಗೀತ ಸ್ಪರ್ಧೆ
ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ
ದ್ವಿತೀಯ ಬಹುಮಾನ: 8,000 ನಗದು ಮತ್ತು ಸ್ಮರಣಿಕೆ
ನಿಯಮಗಳು:
ಧರ್ಮನಾಥ ಸ್ವಾಮಿಯ ಹಾಡು / ಭಜನೆಯನ್ನು ಒಬ್ಬರೇ ಹಾಡಿ, ವಿಡಿಯೋ ಮಾಡಿ
ಕಳುಹಿಸಬೇಕು.
ಸಾಹಿತ್ಯ, ಸ್ವರ, ಹಿನ್ನಲೆ ಸಂಗೀತ, ಛಾಯಾಗ್ರಹಣ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು
ಆಯ್ಕೆ ಮಾಡಲಾಗುವುದು.
ನೀವು ಕಳುಹಿಸಿದ ಹಾಡು / ಭಜನೆ ಮತ್ತು ಅದರ ವಿಡಿಯೋ ಈ ಹಿಂದೆ ಎಲ್ಲಿಯೂ
ಪ್ರಕಟಗೊಂಡಿರಬಾರದು.
ವಿಡಿಯೋದ ಸಮಯ ಕನಿಷ್ಠ 5 ನಿಮಿಷ, ಗರಿಷ್ಠ 8 ನಿಮಿಷಗಳಾಗಿರಬೇಕು. - ಪ್ರಬಂಧ ಸ್ಪರ್ಧೆ
ಪ್ರಥಮ ಬಹುಮಾನ: 3,000 ನಗದು ಮತ್ತು ಸ್ಮರಣಿಕೆ
ದ್ವಿತೀಯ ಬಹುಮಾನ: 2,000 ನಗದು ಮತ್ತು ಸ್ಮರಣಿಕೆ
ನಿಯಮಗಳು:
ಪ್ರಬಂಧದ ವಿಷಯ: “ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ”
ಪ್ರಬಂಧವು 900 ಶಬ್ದಗಳನ್ನು ಮೀರಿರಬಾರದು.
ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ Pdf ಮಾಡಿ ಕಳುಹಿಸತಕ್ಕದು.
ವಿಶೇಷ ಸೂಚನೆ: - ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 05 ಮಾರ್ಚ್ 2024.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
- ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೋ, ವಿಳಾಸ ಮತ್ತು
ಮೊಬೈಲ್ ನಂಬರ್ಗಳನ್ನು ಜೊತೆಗೆ ಕಳುಹಿಸಬೇಕು.
ವಿಡಿಯೋ ಮತ್ತು ಪ್ರಬಂಧಗಳನ್ನು naravibasadi24@gmail.comಗೆ ಮೇಲ್ ಮಾಡಬಹುದು
ಅಥವಾ 9481016887 ವಾಟ್ಸಪ್ ನಂಬರ್ಗೆ ಕಳುಹಿಸಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಅತುಲ್ ಎಸ್. ಸೇಮಿತ – 9481016887
ಶ್ರೀ ಜ್ಞಾನೇಂದ್ರ ಕುಮಾರ್ ಜೈನ್ – 9902799196.