ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2023-27 ರ ವರೆಗಿನ ಮಾಧ್ಯಮ ಪ್ರಸಾರ ಹಕ್ಕು ಹರಾಜು ಪ್ರಕ್ರಿಯೆ ರೋಚಕತೆ ಪಡೆದು ಮುನ್ನಡೆಯುತ್ತಿದೆ.
ಟಿವಿ ಹಕ್ಕು ಮತ್ತು ಡಿಜಿಟಲ್ ಹಕ್ಕಿನ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ. ಇಂದಿಗೆ ವಿರಾಮ ಘೋಷಿಸಲಾಗಿದ್ದು ಮತ್ತೆ ನಾಳೆ ಮುಂದುವರೆಯಲಿದೆ.
ಇಂದಿನ ಸಾಯಂಕಾಲದ ಹರಾಜು ಪ್ರಕ್ರಿಯೆ ಮುಕ್ತಾಯದ ಸಮಯಕ್ಕೆ ಟಿವಿ ಪ್ರಸಾರ ಹಕ್ಕು ಪ್ರತಿ ಪಂದ್ಯಕ್ಕೆ 57 ಕೋ.ರೂಗಳಂತೆ ಹಾಗೂ ಟಿಜಿಟಲ್ ಪ್ರಸಾರ ಹಕ್ಕು ಪ್ರತಿ ಪಂದ್ಯಕ್ಕೆ 48 ಕೋ.ರೂಗಳಂತೆ ಎರಡೂ ಹಕ್ಕುಗಳು ಸೇರಿ ಪಂದ್ಯಕ್ಕೆ 105 ಕೋ.ರೂ ಗಳಾಗಿವೆ. ಒಟ್ಟಾರೆಯಾಗಿ 43 ಸಾವಿರದ 50 ಕೋ.ರೂಗಳಿಗೆ ಹರಾಜು ಪ್ರಕ್ರಿಯೆ ಇಂದಿಗೆ ಮುಕ್ತಾಯವಾಗಿದೆ. ಈ ಹಣ 2017 ರಲ್ಲಿ ಸ್ಟಾರ್ ಸ್ಪೋರ್ಟ್ಸ್ ಪಡೆದಿದ್ದ ಹರಾಜಿಗಿಂತ ಮೂರು ಪಟ್ಟು ಹೆಚ್ಚಳವಾಗಿದೆ.
ರಿಲಯನ್ಸ್ಗೆ ಪ್ರಬಲ ಪೈಪೋಟಿ ನೀಡುತ್ತದೆ ಎನ್ನಲಾಗಿದ್ದ ಅಮೆಜಾನ್ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಇಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಡಿಸ್ನಿ ಹಾಟ್ಸ್ಟಾರ್ ಸ್ಪರ್ಧೆಯಿಂದ ಕಾಲ್ಕಿತ್ತಿದೆ. ಇದೀಗ ಕಣದಲ್ಲಿ ಸೋನಿ ಟಿವಿ, ವಯಕಾಮ್ ರಿಲಯನ್ಸ್, ಜೀ ಗ್ರೂಪ್, ಸ್ಟಾರ್ ಸ್ಪೋರ್ಟ್ ವಾಹಿನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ.