ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಇನ್ಸೈಟ್ ವಿನಯ್ ಎಂದೇ ಖ್ಯಾತರಾಗಿರುವ ವಿನಯ್ ಕುಮಾರ್ ಜಿ ಬಿ ಅವರಿಗೆ ನಿರಾಸೆಯಾಗಿದೆ.
ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಟಿಕೆಟ್ ಕೈ ತಪ್ಪಿದ ಬಳಿಕ ವಿನಯ್ ಅವರು ನೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದು ನನ್ನ ತಪ್ಪಲ್ಲ ಎನ್ನುವುದನ್ನು ನಾನು ಸಾಬೀತುಪಡಿಸಲು ಬಯಸಿದ್ದೇನೆ
ಎಂದು ವಿನಯ್ ಟ್ವೀಟಿಸಿದ್ದರು.
ಈ ಟ್ವೀಟ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಅವರು ಪ್ರತಿಕ್ರಿಯಿಸಿದ್ದರು.
ನೀವು ತಪ್ಪು ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಬ್ರದರ್, ಬಿಜೆಪಿಗೆ ಸೇರಿ. ನಿಮಗೆ ನಿಜಕ್ಕೂ ಒಳ್ಳೆದಾಗಲಿದೆ. ನಿಮಗೆ ಒಳ್ಳೆದಾಗಲಿ
ಎಂದು ತೇಜಸ್ವಿಸೂರ್ಯ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದರು.
ತೇಜಸ್ವಿಸೂರ್ಯಗೆ ಇವತ್ತು ಉತ್ತರ ನೀಡಿರುವ ವಿನಯ್ ಅವರು
ಧನ್ಯವಾದಗಳು ಬ್ರದರ್, ನಾನು ಸರಿಯಾದ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಪರಿಶ್ರಮ ಗಮನಿಸಿ ಮತ್ತು ಭಾರತದ ಸಂವಿಧಾನವನ್ನು ಕಡೆಗಣಿಸುತ್ತಿರುವುದರ ವಿರುದ್ಧ, ಅನ್ಯಾಯ ಮತ್ತು ಕೋಮುವಾದದ ವಿರುದ್ಧ ಹೋರಾಡಲು ನನ್ನ ಪಕ್ಷ ನನಗೆ ಸೂಕ್ತ ಜವಾಬ್ದಾರಿ ನೀಡಲಿದೆ ಎಂದು ಖಚಿತತೆ ನನಗಿದೆ
ಎಂದು ತಿರುಗೇಟು ನೀಡಿದ್ದಾರೆ.