ಹಣದುಬ್ಬರ : ಮತ್ತೆ ಶೇ 0.50 ರೆಪೋ ದರ ಹೆಚ್ಚಳ; ಆರ್​ಬಿಐ

Repo rate

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ದ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ರೆಪೋ ದರ (Repo Rate)ವನ್ನು 50 ಬೇಸಿಸ್ ಪಾಯಿಂಟ್‌ ಏರಿಕೆ ಮಾಡುವ ಘೋಷಣೆ ಮಾಡಿದ್ದಾರೆ. ಈ ಏರಿಕೆಯೊಂದಿಗೆ ರೆಪೊ ದರ 5.9% ಗೆ ಹೆಚ್ಚಿಸಿದೆ. ಇದು ಈ ವರ್ಷದ ನಾಲ್ಕನೇ ಏರಿಕೆಯಾಗಿದೆ.

ಕಳೆದ ನಾಲ್ಕು ತಿಂಗಳುಗಳಲ್ಲಿ 1.9 ರಷ್ಟು ರೆಪೋ ದರವನ್ನು ಹೆಚ್ಚಳ ಮಾಡಲಾಗಿದೆ. ಏಪ್ರೀಲ್​ನಲ್ಲಿ ಶೇ.4 ರಷ್ಟಿದ್ದ ರೆಪೋದರ ಇದೀಗ, ಶೇ.5.9ರಷ್ಟಾಗಿದೆ.

ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ವಿದೇಶಿ ಬಂಡವಾಳದ ಒಳಹರಿವು ಸುಧಾರಿಸಲು ಬಡ್ಡಿದರ (Repo Rate) ದಲ್ಲಿ 50 ಬೇಸಿಸ್ ಪಾಯಿಂಟ್‌ ಗಳ ಹೆಚ್ಚಳ ಮಾಡಲಾಗಿದೆ.

ಆರ್​ಬಿಐನ ಈ ನಿರ್ಧಾರದಿಂದ ಹೊಸ ಮತ್ತು ಹಳೆ ಸಾಲದ ಮೇಲಿನ ಬಡ್ಡಿಯ ಪ್ರಮಾಣ ಹೆಚ್ಚಲಿದೆ. ಇದನ್ನೂ ಓದಿ : Breaking : ಶೇ 0.50 ರೆಪೋ ದರ ಹೆಚ್ಚಳ – ಆರ್​ಬಿಐ