ADVERTISEMENT
ದಕ್ಷಿಣ ಆಫ್ರಿಕಾದ ಸೆಂಚೂರಿಯನ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 408 ರನ್ಗೆ ಆಲೌಟ್ ಆಗಿದೆ.
ಈ ಮೂಲಕ ಭಾರತದ ಎದುರು ಮೊದಲ ಇನ್ನಿಂಗ್ಸ್ನಲ್ಲಿ 163 ರನ್ಗಳ ಮುನ್ನಡೆ ಸಾಧಿಸಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 245 ರನ್ಗೆ ಆಲೌಟ್ ಆಗಿತ್ತು.
ಭಾರತದ ಪರ ವೇಗಿ ಜಸ್ಪೀತ್ ಬೂಮ್ರಾ 89 ರನ್ಗೆ 4 ವಿಕೆಟ್ ಕಬಳಿಸಿದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
ಆಫ್ರಿಕಾ ಪರ ಡೀನ್ ಎಲ್ಗಾರ್ 185 ರನ್, ಮಾರ್ಕೋ ಜಾನ್ಸೆನ್ 84 ರನ್, ಡೇವಿಡ್ ಬೆಂಡಿಗಾಮ್ 56 ರನ್ ಗಳಿಸಿದರು.
ADVERTISEMENT