Cricket: ಭಾರತ-ದಕ್ಷಿಣ ಆಫ್ರಿಕಾ ನಡುವೆ ಕ್ರಿಕೆಟ್​ ಸರಣಿಗೆ ದಿನಾಂಕ ಘೋಷಣೆ

ವಿಶ್ವಕಪ್​ ಮುಗಿದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಎರಡೂ ರಾಷ್ಟ್ರಗಳ ನಡುವಿನ ಸರಣಿಗೆ ದಿನಂಕ ನಿಗದಿಯಾಗಿದೆ.

ಈ ವರ್ಷದ ಡಿಸೆಂಬರ್​ 10ರಿಂದ ಮುಂದಿನ ವರ್ಷದ ಜನವರಿ 7ರವರೆಗೆ ಟೆಸ್ಟ್​, ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳು ನಡೆಯಲಿವೆ.

3 ಟಿ-ಟ್ವೆಂಟಿ, 3 ಏಕದಿನ ಮತ್ತು 2 ಟೆಸ್ಟ್​ ಪಂದ್ಯಕ್ಕಾಗಿ ದಿನಾಂಕ ಘೋಷಣೆಯಾಗಿದೆ.

ಡಿಸೆಂಬರ್​ 10: ಮೊದಲ ಟಿ-ಟ್ವೆಂಟಿ ಡರ್ಬನ್​ನಲ್ಲಿ ನಡೆಯಲಿದೆ.

ಡಿಸೆಂಬರ್​ 12: ಎರಡನೇ ಟಿ-ಟ್ವೆಂಟಿ ಗೆಬ್ರಹಾದಲ್ಲಿ ನಡೆಯಲಿದೆ.

ಡಿಸೆಂಬರ್​ 14: ಮೂರನೇ ಟಿ-ಟ್ವೆಂಟಿ ಪಂದ್ಯ ಜೋಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ.

ಡಿಸೆಂಬರ್​ 17: ಮೊದಲ ಏಕದಿನ ಪಂದ್ಯ ಜೋಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ.

ಡಿಸೆಂಬರ್​ 19: ಎರಡನೇ ಏಕದಿನ ಪಂದ್ಯ ಗೆಬ್ರಹಾದಲ್ಲಿ ನಡೆಯಲಿದೆ.

ಡಿಸೆಂಬರ್​ 21: ಮೂರನೇ ಏಕದಿನ ಪಂದ್ಯ ಪಾರ್ಲ್​​ನಲ್ಲಿ ನಡೆಯಲಿದೆ.

ಡಿಸೆಂಬರ್​ 26: ಮೊದಲ ಟೆಸ್ಟ್​ ಪಂದ್ಯ ಸೆಂಚೂರಿಯನ್​ನಲ್ಲಿ ಆರಂಭವಾಗಲಿದೆ.

ಜನವರಿ 3: ಎರಡನೇ ಟೆಸ್ಟ್​ ಪಂದ್ಯ ಕೇಪ್​ಟೌನ್​​ನಲ್ಲಿ ನಡೆಯಲಿದೆ. 

LEAVE A REPLY

Please enter your comment!
Please enter your name here